ಚಂಡೀಗಢ(ನ.07): ಟೀಮ್ ಇಂಡಿಯಾದ ಹೊಡಬಡಿ ಆಟಗಾರ ಯುವರಾಜ್ ಸಿಂಗ್ ಹಸೆಮಣೆ ಏರುವ ತವಕದಲ್ಲಿದ್ದಾರೆ. ತಮ್ಮ ಬಹುದಿನಗಳ ಗೆಳತಿ ಹಸೆಲ್ ಕೀಚ್ ಕೈಹಿಡಿಯುತ್ತಿದ್ಧಾರೆ. ಮದುವೆಗಾಗಿ ಯುವಿ ವಿಶಿಷ್ಟವಾಗಿ ವೆಡ್ಡಿಂಗ್ ಕಾರ್ಡ್ ಡಿಸೈನ್ ಮಾಡಿಸಿದ್ಧಾರೆ.

ಹೇಗಿದೆ ಯುವಿ ವೆಡ್ಡಿಂಗ್ ಕಾರ್ಡ್..?: ಯುವಿ ಮದುವೆ ಆಮಂತ್ರಣದಲ್ಲಿ ಕ್ರಿಕೆಟ್ ತಮಾಷೆಗಳನ್ನ ಸೇರಿಸಲಾಗಿದೆ. ನೋಡಿದರೆ ಇದು ವೆಡ್ಡಿಂಗ್ ಕಾರ್ಡಾ ಅಥವಾ ಕಾಮಿಕ್ ಕಾರ್ಡಾ ಎನ್ನುವಂತಿದೆ. ಅಂದಹಾಗೆ, ಈ ಆಮಂತ್ರಣ ಪತ್ರಿಕಗೆ `ಯುವರಾಜ್ ಅಂಡ್ ಹಸಲ್ ಪ್ರೀಮಿಯರ್ ಲೀಗ್' ಎಂದು ಹೆಸರಿಡಲಾಗಿದೆ. ಮೊದಲಿನಿಂದಲೂ ತಮ್ಮ ಮದುವೆ ಆಮಂತ್ರಣವನ್ನ ವಿಶಿಷ್ಟವಾಗಿ ಮಾಡುವ ಅಭಿಲಾಷೆ ಹೊಂದಿದ್ದ ಯುವಿ ಈ ಮೂಲಕ ಅದನ್ನ ತೀರಿಸಿಕೊಂಡಿದ್ಧಾರೆ.