2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 113 ರನ್ ಸಿಡಿಸಿದ್ದೇ ಕೊನೆ. ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ತೆರಳಿದ್ದ ಯುವಿ ಚೇತರಿಸಿಕೊಂಡು ಬಂದ ಬಳಿಕ ಫಾರ್ಮ್`ಗೆ ಮರಳಲು ಪರಿತಪಿಸುತ್ತಿದ್ರು. 6 ವರ್ಷಗಳ ಬಳಿಕ ಇದೀಗ, ಶತಕ ಸಿಡಿಸಿ ತಮ್ಮ ಫಿಸಿಕಲ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.
ಕಟಕ್(ಜ.19): ಟೀಮ್ ಇಂಡಿಯಾದ ಹೊಡಿಬಡಿ ಆಟಗಾರ ಯುವರಾಜ್ ಸಿಂಗ್ 6 ವರ್ಷಗಳ ಬಳಿಕ ಏಕದಿನ ಕ್ರಿಕೆಟ್`ನಲ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಕಟಕ್`ನಲ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಭರ್ಜರಿ ಶತಕ ಸಿಡಿಸಿದ್ದಾರೆ. ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಚೇತರಿಕೆ ನೀಡಿದ ಯುವಿ, ಕೊಹ್ಲಿ ಇಟ್ಟಿದ್ದ ನಂಬಿಕೆ ಉಳಿಸಿಕೊಂಡಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 113 ರನ್ ಸಿಡಿಸಿದ್ದೇ ಕೊನೆ. ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ತೆರಳಿದ್ದ ಯುವಿ ಚೇತರಿಸಿಕೊಂಡು ಬಂದ ಬಳಿಕ ಫಾರ್ಮ್`ಗೆ ಮರಳಲು ಪರಿತಪಿಸುತ್ತಿದ್ರು. 6 ವರ್ಷಗಳ ಬಳಿಕ ಇದೀಗ, ಶತಕ ಸಿಡಿಸಿ ತಮ್ಮ ಫಿಸಿಕಲ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.
150 ರನ್ ಸಿಡಿಸಿದ ಯುವಿ ಬಟ್ಲರ್`ಗೆ ಕ್ಯಾಚಿತ್ತು ನಿರ್ಗಮಿಸಿದರು. ಯುವಿಯ ಈ ಭರ್ಜರಿ ಶತಕದಲ್ಲಿ 21 ಬೌಂಡರಿ ಮತ್ತು 3 ಸಿಕ್ಸರ್ ಇದ್ದವು.