ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಕಟಕ್(ಜ.21): ಯುವರಾಜ್ ಸಿಂಗ್.. ಫೀಲ್ಡಿಗಿಳಿದರೆ ಸಿಕ್ಸರ್`ಗಳ ಸುರಿಮಳೆಯಾಗುತ್ತಿತ್ತು. ಎದುರಾಳಿ ಬೌಲರ್`ಗಳು ಬೆಚ್ಚಿಬೀಳುತ್ತಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಪ್ರಮುಖ ಪಾತ್ರ ವಹಿಸಿದ್ದೇ ಯುವಿ. ಆದರೆ, ಕ್ಯಾನ್ಸರ್ ಹೆಮ್ಮಾರಿ ಯುವಿ ಸಾಮರ್ಥ್ಯವನ್ನ ಕುಗ್ಗಿಸಿತ್ತು. ಆದರೂ ಕಮ್ ಬ್ಯಾಕ್ ಮಾಡಿದ ಯುವರಾಜ್ ಸಿಂಗ್ ಟೀಮ್ ಇಂಡಿಯಾಗೆ ಮರಳಿದ್ದಾರೆ.
ಆದರೆ, ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
