ಯುವರಾಜ್(302), ಧೋನಿ(292) ಮತ್ತು ಕೊಹ್ಲಿ(185) ಈ ಮೂವರು ಆಟಗಾರರು ಒಟ್ಟು 779 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

ಬೆಂಗಳೂರು(ಜೂ.26): ಅನಿಲ್ ಕುಂಬ್ಳೆ ರಾಜೀನಾಮೆಯ ಬಳಿಕ ಪ್ರಧಾನ ಕೋಚ್ ಅನುಪಸ್ಥಿತಿ ಎದುರಿಸುತ್ತಿರುವ ಟೀಂ ಇಂಡಿಯಾಗೆ ಹಿರಿಯ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಿಳಿಸಿದ್ದಾರೆ.

ಧೋನಿ, ಯುವರಾಜ್ ಮತ್ತು ಕೊಹ್ಲಿ ತೆರೆಮರೆಯಲ್ಲಿ ಕೋಚ್ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂಡದಲ್ಲಿರುವ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿಯೂ ಧೋನಿ ಹಾಗೂ ಯುವಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ಹಿರಿಯ ಆಟಗಾರರ ಅನುಭವ ಯುವಕರಿಗೆ ಸಾಕಷ್ಟು ಪಾಠ ಕಲಿಸಲಿದೆ ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಯುವರಾಜ್(302), ಧೋನಿ(292) ಮತ್ತು ಕೊಹ್ಲಿ(185) ಈ ಮೂವರು ಆಟಗಾರರು ಒಟ್ಟು 779 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.