ಜಪಾನ್ ತಂಡ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಜಪಾನ್ ತಂಡದ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟಕ್ಕೂ ಯುವಿ ಹೇಳಿದ್ದೇನು? ಇಲ್ಲಿದೆ ವಿವರ.
ಪಂಜಾಬ್(ಜು.04): ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದ ಜಪಾನ್ ಫಿಫಾ ಫುಟ್ಬಾಲ್ ವಿಶ್ವಕಪ್‌ನಿಂದ ಹೊರಬಿದ್ದಿದೆ. ಸೋಲಿನ ಬಳಿಕ ಜಪಾನ್ ತಂಡ ತಮಗೆ ನೀಡಿದ ಡ್ರೆಸ್ಸಿಂಗ್ ರೂಂ ಸ್ವಚ್ಚಗೊಳಿಸಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಡ್ರೆಸ್ಸಿಂಗ್ ಕೊಠಡಿಯನ್ನ ಸ್ವತಃ ಜಪಾನ್ ಫುಟ್ಬಾಲ್ ಆಟಗಾರರೇ ಸ್ವಚ್ಚಗೊಳಿಸಿ ಧನ್ಯವಾದ ನೋಟ್ ಬರೆದಿಟ್ಟಿದ್ದರು. ಇದೀಗ ಜಪಾನ್ ತಂಡ ಸಾಮಾಜಿಕ ಕಳಕಳಿಗೆ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಪಾನ್ ತಂಡದ ಕ್ರೀಡಾ ಸ್ಪೂರ್ತಿ ಎಲ್ಲರಿಗೂ ಮಾದರಿ. ಜಪಾನ್ ತಂಡ ಹಾಗೂ ಅವರ ಅಭಿಮಾನಿಗಳು ಮಾಡಿದ ಸ್ವಚ್ಚತಾ ಕಾರ್ಯದಿಂದ ಇಡೀ ವಿಶ್ವವೇ ಕಲಿಯಬೇಕಿದೆ. ಎಲ್ಲಾ ಕ್ರೀಡಾಪಟುಗಳು ಸ್ವಚ್ಚತೆಯನ್ನ ಅಳವಡಿಸಿಕೊಳ್ಳಬೇಕು ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:ಪಂದ್ಯ ಸೋತ ಬಳಿಕ ಜಪಾನ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ್ದೇನು?
ಜಪಾನ್ ತಂಡ ಡ್ರೆಸ್ಸಿಂಗ್ ರೂಂ ಕ್ಲೀನ್ ಮಾಡಿದರೆ, ಜಪಾನ್ ಅಭಿಮಾನಿಗಳು ಇಡೀ ಕ್ರೀಡಾಂಗಣವನ್ನ ಸ್ವಚ್ಚಗೊಳಿಸಿದ್ದರು. ಬೆಲ್ಜಿಯಂ ವಿರುದ್ಧ 2-3 ಅಂತರದಲ್ಲಿ ಜಪಾನ್ ಸೋಲು ಅನುಭವಿಸೋ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಇದನ್ನು ಓದಿ:ಫಿಫಾ 2018 : ಜಪಾನ್ ತಂಡ ಹಾಗೂ ಅಭಿಮಾನಿಗಳ ಕಾರ್ಯಕ್ಕೆ ನೀವೂ ಹ್ಯಾಟ್ಸ್ ಆಫ್ ಹೇಳಲೇಬೇಕು!
