ರಷ್ಯಾ(ಜು.03): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬೆಲ್ಜಿಯಂ ವಿರುದ್ದದ ಸೋಲಿನ ಬಳಿಕ ಜಪಾನ್ ತಂಡ ಡ್ರೆಸ್ಸಿಂಗ್ ರೂಂಗೆ ತೆರಳಿ ಇಡೀ ಕೊಠಡಿಯನ್ನ ಸ್ವಚ್ಚಗೊಳಿಸಿತ್ತು. ಜಪಾನ್ ಫುಟ್ಬಾಲ್ ಪಟುಗಳು ಸ್ವತಃ ಡ್ರೆಸ್ಸಿಂಗ್ ರೂಂ ಕ್ಲೀನ್ ಮಾಡಿ ಧನ್ಯವಾದ ನೋಟ್ ಬರೆದಿಟ್ಟಿತ್ತು. 

ಇದನ್ನೂ ಓದ: ಪಂದ್ಯ ಸೋತ ಬಳಿಕ ಜಪಾನ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ್ದೇನು?

ಜಪಾನ್ ತಂಡದ ಸ್ವಚ್ಚತಾ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಜಪಾನ್ ತಂಡ ಡ್ರೆಸ್ಸಿಂಗ್ ರೂಂ ಸ್ವಚ್ಚಗೊಳಿಸಿದರೆ, ಜಪಾನ್ ಅಭಿಮಾನಿಗಳು ಇಡೀ ಕ್ರೀಡಾಂಗಣವ್ನೇ ಸ್ವಚ್ಚಗೊಳಿಸಿದ್ದಾರೆ.

 

 

ಜಪಾನ್ ಹಾಗೂ ಬೆಲ್ಜಿಯಂ ಪಂದ್ಯದ ಬಳಿಕ ಇಡೀ ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಬಾಟಲ್ ಹಾಗೂ ಇತರ ಕಸಗಳನ್ನ ಸ್ವಚ್ಚಗೊಳಿಸಿದ್ದಾರೆ. ಸಂಪೂರ್ಣ ಕ್ರೀಡಾಂಗಣವನ್ನ ಕ್ಲೀನ್ ಮಾಡಿರುವ ಜಪಾನ್ ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪಂದ್ಯ ಸೋತು ಫಿಫಾ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದರೂ, ಜಪಾನ್ ತಂಡದ ಸ್ವಚ್ಚತಾ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.