ಮೂಲಗಳ ಪ್ರಕಾರ ಯುವರಾಜ್ ಮತ್ತೊಮ್ಮೆ ‘ಯೋ ಯೋ’ ಫಿಟ್ನೆಸ್ ಟೆಸ್ಟ್‌'ನಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನಲಾಗಿದೆ.

ಮುಂಬೈ(ಅ.15): ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತ ತಂಡಕ್ಕೆ ವಾಪಸಾಗುವುದು ಮತ್ತಷ್ಟು ಕಠಿಣಗೊಂಡಂತಿದೆ. ಮೂಲಗಳ ಪ್ರಕಾರ ಯುವರಾಜ್ ಮತ್ತೊಮ್ಮೆ ‘ಯೋ ಯೋ’ ಫಿಟ್ನೆಸ್ ಟೆಸ್ಟ್‌'ನಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

35 ವರ್ಷದ ಯುವಿ ಮಂಗಳವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ‘ಯೋ ಯೋ’ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ‘ಯೋ ಯೋ’ ಟೆಸ್ಟ್‌ನಲ್ಲಿ ಕಡ್ಡಾಯವಾಗಿ ಉರ್ತ್ತೀಣರಾಗಬೇಕು ಎಂದು ಬಿಸಿಸಿಐ ಇತ್ತೀಚೆಗಷ್ಟೇ ನಿಯಮ ಜಾರಿಗೊಳಿಸಿತ್ತು. ಪರೀಕ್ಷೆಯಲ್ಲಿ ಕನಿಷ್ಠ 16.1 ಅಂಕ ಗಳಿಸಬೇಕಿದ್ದು ಯುವಿ, ಕೆಲವೇ ಅಂಕಗಳ ಅಂತರದಲ್ಲಿ ಅವರು ಅನುತ್ತೀರ್ಣರಾದರು ಎಂದು ಮೂಲಗಳು ತಿಳಿಸಿವೆ.

ಇನ್ನು ಟೆಸ್ಟ್ ಪರಿಣಿತ ಬ್ಯಾಟ್ಸ್'ಮನ್ ಚೇತೇಶ್ವರ ಪೂಜಾರ, ಸ್ಪಿನ್ನರ್ ಆರ್. ಅಶ್ವಿನ್ ಯೋ ಯೋ ಟೆಸ್ಟ್'ನಲ್ಲಿ ಪಾಸ್ ಆಗಿದ್ದಾರೆ.