ಯುವರಾಜ್ ಸಿಂಗ್ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ 28 ವರ್ಷಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2011 ರ ವಿಶ್ವಕಪ್'ನಲ್ಲಿ ನಾಲ್ಕು ಅರ್ಧಶತಕ ಸೇರಿದಂತೆ 15 ವಿಕೆಟ್ ಕಬಳಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮುಂಬೈ(ನ.07): ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ರಿಕೆಟ್ ಹಾಗೂ ವೈಯುಕ್ತಿಕ ಬದುಕಿನ ಹಲವು ನೆನಪುಗಳನ್ನು ಹಿಂದಿಯ ಖ್ಯಾತ ರಿಯಾಲಿಟಿ ಕಾರ್ಯಕ್ರಮವಾದ 'ಕೌನ್ ಬನೇಗಾ ಕರೋಡ್'ಪತಿ' ಯಲ್ಲಿ ಬಿಚ್ಚಿಟ್ಟಿದ್ದಾರೆ.
ಈ ವೇಳೆ ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಡಿದ ಕಥೆಯನ್ನು ತೆರೆದಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಕ್ವಿಜ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಜತೆ ಯುವರಾಜ್ ಸ್ಪರ್ಧಿಸಿದ್ದರು.
ಈ ವೇಳೆ 2011ರ ವಿಶ್ವಕಪ್ ವೇಳೆ ಕ್ಯಾನ್ಸರ್'ನಿಂದ ಅನುಭವಿಸಿದ ನೋವನ್ನು ನೆನೆದು ಯುವರಾಜ್ ಕಣ್ಣೀರಿಟ್ಟಿದ್ದಾರೆ. ‘ಕ್ಯಾನ್ಸರ್ ಇದೆ ಎಂದು ತಿಳಿದ ನಂತರವೂ ನಾನು ಆಡುವುದನ್ನು ಮುಂದುವರಿಸಿದೆ. ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಉಳಿಯುವುದೇ ಕಷ್ಟ ಎಂದಿದ್ದರು. ಆದರೆ, ವಿಶ್ವಕಪ್ ಗೆಲ್ಲಬೇಕು ಎನ್ನುವುದೊಂದೇ ನನ್ನ ಗುರಿಯಾಗಿತ್ತು’ ಎಂದು ಯುವಿ ಹೇಳಿದ್ದಾರೆ.