ಯುವರಾಜ್ ಸಿಂಗ್ ಸ್ಪೂರ್ತಿದಾಯಕ ವೃತ್ತಿಬದುಕು ಅಂತ್ಯಗೊಳ್ಳುವುದತ್ತ ಸಾಗಿದೆ ಎನ್ನುವ ಚರ್ಚೆಗೆ ಮತ್ತಷ್ಟು ಇಂಬು ನೀಡುವಂತ ಪ್ರಸಂಗ ನಡೆದಿದೆ.
ಬೆಂಗಳೂರು(ಸೆ.09): ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಟೀಂ ಇಂಡಿಯಾ ಪರ ಮಹತ್ವದ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ತೆರೆಮರೆಗೆ ಸರಿಯುವ ಕಾಲ ಬಂದಿದೆಯೇ ಎಂಬ ಅನುಮಾನ ದಟ್ಟವಾಗತೊಡಗಿದೆ.
ಹೌದು, ಯುವರಾಜ್ ಸಿಂಗ್ ಸ್ಪೂರ್ತಿದಾಯಕ ವೃತ್ತಿಬದುಕು ಅಂತ್ಯಗೊಳ್ಳುವುದತ್ತ ಸಾಗಿದೆ ಎನ್ನುವ ಚರ್ಚೆಗೆ ಮತ್ತಷ್ಟು ಇಂಬು ನೀಡುವಂತ ಪ್ರಸಂಗ ನಡೆದಿದೆ. ಬಿಸಿಸಿಐ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ 14 ಮಂದಿ ಆಟಗಾರರ ಅಧ್ಯಕ್ಷರ ಇಲೆವೆನ್ ತಂಡವನ್ನು ಆಯ್ಕೆ ಮಾಡಿತ್ತು. ಇದಕ್ಕಾಗಿ ಅಗ್ರ 74 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿತ್ತು. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಹೀಗಾಗಿ ಯುವಿ ಅಂತರಾಷ್ಟ್ರೀಯ ಕ್ರಿಕೆಟ್ ಮುಗಿಯುವ ಸಾಧ್ಯತೆಗಳು ದಟ್ಟವಾಗ ತೊಡಗಿವೆ.
ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೂಡ ಮುಂಬರುವ 2019ರ ವಿಶ್ವಕಪ್'ಗೆ ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದರು.
