ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ವಿದಾಯ ಘೋಷಿಸಿ ಒಂದುವಾರ ಕಳೆಯುವುದರೊಳಗಾಗಿ 40 ವರ್ಷದ ಯೂನಿಸ್ ಖಾನ್ ಕೂಡಾ ವೃತ್ತಿಜೀವನಕ್ಕೆ ವಿದಾಯ ಘೋಷಿಸಿರುವುದು ಪಾಕಿಸ್ತಾನ ಅಭಿಮಾನಿಗಳಲ್ಲಿ ನಿರಾಸೆ ಮೂಡುವಂತೆ ಮಾಡಿದೆ.

ಕರಾಚಿ(ಏ.08): ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಂತರಾಷ್ಟೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಇಂದು ವಿದಾಯ ಹೇಳಿದ್ದಾರೆ. ಮುಂಬರುವ ವೆಸ್ಟ್'ಇಂಡೀಸ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಬಳಿಕ ಯೂನೀಸ್ ಖಾನ್ ಅವರ ವರ್ಣರಂಜಿತ ಕ್ರಿಕೆಟ್ ಜೀವನಕ್ಕೆ ತೆರೆಬೀಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ವಿದಾಯ ಘೋಷಿಸಿ ಒಂದುವಾರ ಕಳೆಯುವುದರೊಳಗಾಗಿ 40 ವರ್ಷದ ಯೂನಿಸ್ ಖಾನ್ ಕೂಡಾ ವೃತ್ತಿಜೀವನಕ್ಕೆ ವಿದಾಯ ಘೋಷಿಸಿರುವುದು ಪಾಕಿಸ್ತಾನ ಅಭಿಮಾನಿಗಳಲ್ಲಿ ನಿರಾಸೆ ಮೂಡುವಂತೆ ಮಾಡಿದೆ.

ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ಗರಿಷ್ಟ ರನ್ ಕಲೆಹಾಕಿದ ಆಟಗಾರ ಎನ್ನುವ ದಾಖಲೆಯನ್ನು ಯೂನಿಸ್ ಖಾನ್ ನಿರ್ಮಿಸಿದ್ದಾರೆ. ಒಟ್ಟು 115 ಟೆಸ್ಟ್ ಪಂದ್ಯಗಳನ್ನಾಡಿರುವ ಯೂನಿಸ್ ಖಾನ್ 53.07ರ ಸರಾಸರಿಯಲ್ಲಿ 9,977 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ 265 ಬಾರಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದು 7,249ರನ್ ಬಾರಿಸಿದ್ದಾರೆ.