ಸೀಮಿತ ಓವರ್'ಗಳ ತಂಡದಲ್ಲಿ ಖಾಯಂ ಸದಸ್ಯನಾಗಿರುವ ದಿನೇಶ್ ಕಾರ್ತಿಕ್, ಟೆಸ್ಟ್ ತಂಡಕ್ಕೆ 8 ವರ್ಷಗಳ ಬಳಿಕ ಸ್ಥಾನ ಪಡೆದಿದ್ದಾರೆ. ಕಾರ್ತಿಕ್ 2010ರ ಬಾಂಗ್ಲದೇಶ ಪ್ರವಾಸಕ್ಕೆ ಎರಡನೇ ಕೀಪರ್ ಆಗಿ ಸ್ಥಾನ ಪಡೆದಿದ್ದರು.    

ಸೆಂಚೂರಿಯನ್(ಜ.16): ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್'ಮನ್ ವೃದ್ದಿಮಾನ್ ಸಾಹ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಅಂತಿಮ ಟೆಸ್ಟ್'ನಿಂದ ಹೊರಬಿದ್ದಿದ್ದು ಅವರ ಬದಲಿಗೆ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ.

ಕಳೆದೆರಡು ವರ್ಷಗಳಿಂದ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಾಹ, ಮೊದಲ ಟೆಸ್ಟ್'ನಲ್ಲಿ 10 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು. ಗಾಯದ ಪ್ರಮಾಣ ತೀವ್ರವಾಗಿರುವ ಹಿನ್ನಲೆಯಲ್ಲಿ ಸಾಹ ಅವರನ್ನು ಕೈಬಿಟ್ಟು, ತಮಿಳುನಾಡು ಕ್ರಿಕೆಟಿಗ ಕಾರ್ತಿಕ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ತಿಕ್ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸೀಮಿತ ಓವರ್'ಗಳ ತಂಡದಲ್ಲಿ ಖಾಯಂ ಸದಸ್ಯನಾಗಿರುವ ದಿನೇಶ್ ಕಾರ್ತಿಕ್, ಟೆಸ್ಟ್ ತಂಡಕ್ಕೆ 8 ವರ್ಷಗಳ ಬಳಿಕ ಸ್ಥಾನ ಪಡೆದಿದ್ದಾರೆ. ಕಾರ್ತಿಕ್ 2010ರ ಬಾಂಗ್ಲದೇಶ ಪ್ರವಾಸಕ್ಕೆ ಎರಡನೇ ಕೀಪರ್ ಆಗಿ ಸ್ಥಾನ ಪಡೆದಿದ್ದರು.