Asianet Suvarna News Asianet Suvarna News

Wrestlers Protest ಸಂಸತ್‌ ಭವ​ನಕ್ಕಿಂದು ಕುಸ್ತಿ​ಪ​ಟು​ಗ​ಳ ಮುತ್ತಿ​ಗೆ!

ಬ್ರಿಜ್‌​ಭೂ​ಷಣ್‌ ಸಿಂಗ್‌ ಬಂಧನಕ್ಕೆ ಮುಂದುವರೆದ ಕುಸ್ತಿಪಟುಗಳ ಹೋರಾಟ
ನೂತನ ಸಂಸತ್‌ ಭವನದ ಎದುರು ‘ಮಹಾ ಪಂಚಾಯತ್‌’ ಹೆಸ​ರಿ​ನಲ್ಲಿ ಬೃಹತ್‌ ಪ್ರತಿ​ಭ​ಟನೆ
ಮೋದಿ ಸಂಸತ್‌ ಭವನದ ಉದ್ಘಾ​ಟಿ​ಸುವ ಸಮ​ಯ​ದಲ್ಲೇ ಕುಸ್ತಿ​ಪ​ಟು​ಗಳು ಸಂಸತ್‌ ಭವನಕ್ಕೆ ಮುತ್ತಿಗೆ 

wrestlers to go ahead with peaceful march to new Parliament building kvn
Author
First Published May 28, 2023, 10:18 AM IST

ನವ​ದೆ​ಹ​ಲಿ(ಮೇ.28): ಹಲವು ಗಂಭೀರ ಆರೋ​ಪ​ಗ​ಳನ್ನು ಎದು​ರಿ​ಸು​ತ್ತಿ​ರುವ ಭಾರತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಬಂಧ​ನಕ್ಕೆ ಒತ್ತಾ​ಯಿಸಿ ದೇಶದ ಅಗ್ರ​ಕು​ಸ್ತಿ​ಪ​ಟು​ಗಳು ಭಾನು​ವಾರ ನೂತನ ಸಂಸತ್‌ ಭವನದ ಎದುರು ‘ಮಹಾ ಪಂಚಾಯತ್‌’ ಹೆಸ​ರಿ​ನಲ್ಲಿ ಬೃಹತ್‌ ಪ್ರತಿ​ಭ​ಟನೆ ನಡೆ​ಸ​ಲಿ​ದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಭವನದ ಉದ್ಘಾ​ಟಿ​ಸುವ ಸಮ​ಯ​ದಲ್ಲೇ ಕುಸ್ತಿ​ಪ​ಟು​ಗಳು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆ​ಸು​ತ್ತಿದ್ದು, ಸಂಘ​ರ್ಷಕ್ಕೆ ಎಡೆ ಮಾಡಿ​ಕೊ​ಡುವ ಸಾಧ್ಯತೆ ಇದೆ.

ವರ್ಷ​ಗಳ ಹಿಂದೆ ಕೃಷಿ ಕಾಯ್ದೆ​ಗ​ಳನ್ನು ವಿರೋ​ಧಿಸಿ ವಿವಿಧ ರಾಜ್ಯ​ಗಳ ರೈತರು ದೆಹ​ಲಿ​ಯಲ್ಲಿ ‘ಮಹಾ ಪಂಚಾ​ಯತ್‌’ ಎಂಬ ಬೃಹತ್‌ ಹೋರಾಟ ಸಂಘ​ಟಿ​ಸಿ​ದ್ದರು. ಇದೀಗ ಕುಸ್ತಿ​ಪ​ಟು​ಗಳು ಕೂಡಾ ಇದೇ ಹೆಸ​ರಲ್ಲಿ ಹೋರಾ​ಟಕ್ಕೆ ಮುಂದಾ​ಗಿದ್ದಾರೆ. ಇದ​ಕ್ಕಾಗಿ ವಿವಿಧ ರಾಜ್ಯ​ಗಳಿಂದ ಕುಸ್ತಿ​ಪ​ಟು​ಗಳ ಬೆಂಬ​ಲಿ​ಗರು ಈಗಾ​ಗಲೇ ದೆಹ​ಲಿಗೆ ಆಗ​ಮಿ​ಸಿದ್ದು, ರೈತ, ವಿದ್ಯಾರ್ಥಿ, ಮಹಿಳಾ ಸಂಘ​ಟ​ನೆ​ಗ​ಳು ಹೋರಾ​ಟದಲ್ಲಿ ಕೈಜೋಡಿ​ಸುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಕುಸ್ತಿ​ಪಟು ವಿನೇಶ್‌ ಫೋಗಾಟ್‌, ‘ಮ​ಹಾ​ಪಂಚಾ​ಯ​ತ್‌ಗೆ ಅನು​ಮತಿ ಕೊಡು​ತ್ತಿಲ್ಲ. ನಮ್ಮನ್ನು ಪೊಲೀ​ಸರು ತಡೆ​ದರೆ ಅಲ್ಲೇ ಪ್ರತಿ​ಭ​ಟಿ​ಸು​ತ್ತೇವೆ. ಶಾಂತ ರೀತಿ​ಯಲ್ಲೇ ಹೋರಾಟ ನಡೆ​ಸು​ತ್ತೇವೆ. ಆದರೆ ನಮ್ಮ ಹೋರಾ​ಟ​ವನ್ನು ಹಳಿ ತಪ್ಪಿ​ಸಲು ಹಲ​ವರು ಪ್ರಯ​ತ್ನಿ​ಸು​ತ್ತಿ​ದ್ದಾ​ರೆ’ ಎಂದು ಆತಂಕ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಇಂದಿ​ನಿಂದ ಫ್ರೆಂಚ್‌ ಓಪನ್‌ ಟೆನಿ​ಸ್‌: 23ನೇ ಗ್ರ್ಯಾನ್‌ಸ್ಲಾಂ ಗೆಲ್ತಾರಾ ಜೋಕೋ?

ಬ್ರಿಜ್‌ಗೆ ಕಾಣದ ಕೈಗ​ಳಿಂದ ರಕ್ಷ​ಣೆ

ಇನ್ನು, ಭಾನು​ವಾರ ಬ್ರಿಜ್‌ಭೂಷಣ್‌ ಸಿಂಗ್‌ ನೂತನ ಸಂಸತ್‌ ಭವನದ ಉದ್ಘಾಟನೆಗೆ ತೆರಳಿದರೆ ಅವರ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ವಿನೇಶ್‌ ಹೇಳಿ​ದ್ದಾರೆ. ‘ಬ್ರಿಜ್‌ ಉದ್ಘಾ​ಟ​ನೆಗೆ ಆಗ​ಮಿ​ಸಿದೆ ದೇಶ ಯಾವ ಕಡೆಗೆ ಸಾಗು​ತ್ತಿದೆ ಎಂಬುದು ಗೊತ್ತಾ​ಗ​ಲಿದೆ. ಬ್ರಿಜ್‌​ರನ್ನು ರಕ್ಷಿ​ಸಲು ಪ್ರಯ​ತ್ನಿ​ಸು​ತ್ತಿ​ರು​ವ​ವರು ನಮ್ಮ ವಿರು​ದ್ಧ​ವಾ​ಗಿ​ದ್ದಾರೆ. ಸರ್ಕಾ​ರದ ಮಟ್ಟ​ದಲ್ಲಿ ಏನಾ​ಗು​ತ್ತಿದೆ ಎಂಬುದು ಗೊತ್ತಿಲ್ಲ. ಆದರೆ ಕೆಲ​ವರು ಬ್ರಿಜ್‌​ರನ್ನು ರಕ್ಷಿ​ಸು​ತ್ತಿ​ದ್ದಾರೆ. ಇದು ದೇಶದ ಮಹಿ​ಳೆ​ಯರ ಪಾಲಿಗೆ ಅಪಾಯ’ ಎಂದಿ​ದ್ದಾ​ರೆ.

ಮಹಿಳಾ ಹಾಕಿ​: ಆಸೀ​ಸ್‌ ವಿರುದ್ಧ ಭಾರ​ತಕ್ಕೆ ಗೆಲು​ವು

ಅಡಿಲೇಡ್‌: ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ಹಾಕಿ ತಂಡ ಗೆಲು​ವಿ​ನೊಂದಿಗೆ ಸರ​ಣಿಗೆ ಗುಡ್‌ಬೈ ಹೇಳಿದೆ. ಶನಿ​ವಾರ ಆಸೀಸ್‌ ‘ಎ’ ತಂಡದ ವಿರುದ್ಧ ಭಾರತ 2-1 ಗೋಲು​ಗ​ಳಿಂದ ಜಯ​ಗ​ಳಿ​ಸಿತು. ನವ್‌​ನೀತ್‌ ಕೌರ್‌​(10ನೇ ನಿಮಿ​ಷ), ದೀಪ್‌ ಗ್ರೇಸ್‌​(25ನೇ ನಿಮಿ​ಷ) ಗೋಲು ಬಾರಿ​ಸಿ, ಭಾರ​ತ​ವನ್ನು ಗೆಲ್ಲಿ​ಸಿ​ದರು. ಆಸ್ಪ್ರೇ​ಲಿಯಾ ತಂಡದ ವಿರುದ್ಧ 3 ಪಂದ್ಯ​ಗಳ ಸರ​ಣಿ​ಯನ್ನು 0-2 ಅಂತ​ರ​ದಲ್ಲಿ ಕಳೆ​ದು​ಕೊಂಡಿದ್ದ ಭಾರತ, ಆಸೀಸ್‌ ‘ಎ’ ತಂಡದ ವಿರುದ್ಧದ ಮೊದಲ ಪಂದ್ಯ​ದ​ಲ್ಲಿ 2-3 ಅಂತ​ರ​ದಲ್ಲಿ ಸೋಲ​ನು​ಭ​ವಿ​ಸಿತ್ತು.

ಪ್ರೊ ಲೀಗ್‌ ಹಾಕಿ: ಬ್ರಿಟ​ನ್‌ ವಿರುದ್ಧ ಭಾರ​ತಕ್ಕೆ ಸೋಲು

ಲಂಡ​ನ್‌: ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಭಾರತ ಸತತ 2ನೇ ಸೋಲ​ನು​ಭ​ವಿ​ಸಿದ್ದು, ಅಂಕ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾನ ಕಳೆ​ದು​ಕೊಂಡಿದೆ. ಶುಕ್ರ​ವಾರ ಬೆಲ್ಜಿಯಂ ವಿರುದ್ಧ ಸೋತಿದ್ದ ಭಾರತ ಶನಿ​ವಾರ ಬ್ರಿಟನ್‌ ವಿರುದ್ಧ 2-4 ಗೋಲು​ಗ​ಳಿಂದ ಶರ​ಣಾ​ಯಿ​ತು. ಭಾರ​ತದ ಪರ ಹರ್ಮ​ನ್‌​ಪ್ರೀತ್‌ ಸಿಂಗ್‌ 13 ಮತ್ತು 42ನೇ ನಿಮಿ​ಷ​ಗ​ಳಲ್ಲಿ ದೊರೆತ ಪೆನಾಲ್ಟಿಅವ​ಕಾ​ಶ​ಗ​ಳನ್ನು ಗೋಲಾಗಿ ಪರಿ​ವ​ರ್ತಿ​ಸಿ​ದರೂ ತಂಡದ ಗೆಲುವಿಗೆ ಸಾಕಾ​ಗ​ಲಿಲ್ಲ. ಇದ​ರೊಂದಿಗೆ ಬ್ರಿಟ​ನ್‌​(22 ಅಂಕ) ಅಗ್ರ​ಸ್ಥಾ​ನ​ಕ್ಕೇ​ರಿ​ದರೆ, ಭಾರತ(19 ಅಂಕ) 2ನೇ ಸ್ಥಾನಕ್ಕೆ ಜಾರಿತು. ಮುಂದಿನ ಪಂದ್ಯ​ದಲ್ಲಿ ಭಾರತ ಜೂ.2ಕ್ಕೆ ಬೆಲ್ಜಿಯಂ ವಿರುದ್ಧ ಆಡ​ಲಿ​ದೆ.

Follow Us:
Download App:
  • android
  • ios