Asianet Suvarna News Asianet Suvarna News

ಇಂದಿ​ನಿಂದ ಫ್ರೆಂಚ್‌ ಓಪನ್‌ ಟೆನಿ​ಸ್‌: 23ನೇ ಗ್ರ್ಯಾನ್‌ಸ್ಲಾಂ ಗೆಲ್ತಾರಾ ಜೋಕೋ?

ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ
ರಾಫಾ, ಫೆಡರರ್ ಇಲ್ಲದೇ ನಡೆಯುತ್ತಿರುವ ಟೂರ್ನಿ
ದಾಖಲೆಯ 23ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ನೋವಾಕ್ ಜೋಕೋವಿಚ್

French Open 2023 begins Novak Djokovic eyes on 23rd Tennis Grand slam kvn
Author
First Published May 28, 2023, 10:03 AM IST

ಪ್ಯಾರಿ​ಸ್‌(ಮೇ.28): ದಿಗ್ಗ​ಜರಾದ ರಾಫೆಲ್‌ ನಡಾಲ್‌, ರೋಜರ್‌ ಫೆಡ​ರರ್‌ ಅನು​ಪ​ಸ್ಥಿ​ತಿ​ಯಲ್ಲಿ ನಡೆ​ಯ​ಲಿ​ರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ​ಟೆ​ನಿಸ್‌ ಟೂರ್ನಿ ಭಾನು​ವಾರ ಆರಂಭ​ಗೊ​ಳ್ಳ​ಲಿದೆ. 2016, 2021ರ ಚಾಂಪಿ​ಯನ್‌ ಸರ್ಬಿಯಾದ ನೋವಾಕ್‌ ಜೋಕೋ​ವಿಚ್‌ ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿ​ಟ್ಟಿದ್ದು, 2007ರ ಬಳಿಕ ಸತತ 2 ಬಾರಿ ಫ್ರೆಂಚ್‌ ಓಪನ್‌ ಗೆದ್ದ ದಾಖಲೆ ಬರೆಯಲು ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಕಾತರಿಸು​ತ್ತಿ​ದ್ದಾ​ರೆ. ಅಗ್ರ ಶ್ರೇಯಾಂಕಿತ, ಹಾಲಿ ಯುಎಸ್‌ ಓಪನ್‌ ಚಾಂಪಿ​ಯನ್‌ ಸ್ಪೇನ್‌ನ ಕಾರ್ಲೊಸ್‌ ಆಲ್ಕ​ರಾಜ್‌ ಪ್ರಮುಖ ಆಕ​ರ್ಷ​ಣೆ​ಯಾ​ಗಿ​ದ್ದಾ​ರೆ.

ಟೂರ್ನಿಯ 14 ಬಾರಿ ಚಾಂಪಿ​ಯನ್‌ ನಡಾಲ್‌ ಗಾಯ​ದಿಂದಾಗಿ ಈ ಬಾರಿ ಆಡು​ತ್ತಿ​ಲ್ಲ. 20 ಗ್ರ್ಯಾನ್‌ಸ್ಲಾಂ ಗೆದ್ದಿ​ರುವ ಫೆಡ​ರರ್‌ ಕಳೆದ ವರ್ಷ ನಿವೃ​ತ್ತಿ​ಯಾ​ಗಿ​ದ್ದಾರೆ. ಹೀಗಾಗಿ ನಡಾ​ಲ್‌ರ 22 ಗ್ರ್ಯಾನ್‌​ಸ್ಲಾಂಗಳ ದಾಖ​ಲೆ​ ಮುರಿ​ಯಲು ಜೋಕೋಗೆ ಉತ್ತಮ ಅವ​ಕಾ​ಶ​ವಿದೆ. ಇನ್ನು, 2ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆ​ಡೆವ್‌, ಕಳೆದ ಆವೃತ್ತಿ ರನ್ನ​ರ್‌-ಅಪ್‌ ಕ್ಯಾಸ್ಪೆರ್‌ ರುಡ್‌, ಆ್ಯಂಡ್ರೆ ರುಬ್ಲೆವ್‌, ಹೋಲ್ಗರ್‌ ರ್ಯುನ್‌, ಸ್ಟೆಫಾ​ನೊಸ್‌ ಸಿಟ್ಸಿ​ಪಾ​ಸ್‌ ಪುರು​ಷರ ಸಿಂಗ​ಲ್ಸ್‌​ನಲ್ಲಿ ಕಣಕ್ಕಿಳಿಯಲಿರುವ ಪ್ರಮುಖರು.

'ಒಂದು ವೇಳೆ ನಾನೇ ಆಯ್ಕೆಗಾರನಾಗಿದ್ದರೇ..': ವಿರಾಟ್ ಟಿ20 ಬದುಕಿನ ಬಗ್ಗೆ ತುಟಿಬಿಚ್ಚಿದ ಸನ್ನಿ..!

ಮಹಿಳಾ ಸಿಂಗ​ಲ್ಸ್‌​ನಲ್ಲಿ ಸ್ವಿಯಾ​ಟೆಕ್‌ ಜೊತೆ​ಗೆ ಹಾಲಿ ಆಸ್ಪ್ರೇ​ಲಿ​ಯನ್‌ ಓಪನ್‌ ಚಾಂಪಿ​ಯನ್‌ ಅರೈನಾ ಸಬ​ಲೆಂಕಾ, ಹಾಲಿ ವಿಂಬ​ಲ್ಡನ್‌ ಚಾಂಪಿ​ಯನ್‌ ಎಲೆನಾ ರಬೈ​ಕೆನಾ ಸೇರಿ​ದಂತೆ ಪ್ರಮು​ಖರು ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ದ್ದಾ​ರೆ.

ಪ್ರಣಯ್‌ ಮಲೇ​ಷ್ಯಾ ಮಾಸ್ಟ​ರ್ಸ್‌ ಫೈನ​ಲ್‌​ಗೆ

ಕೌಲಾಲಂಪುರ: ಭಾರತದ ತಾರಾ ಶಟ್ಲರ್‌ ಎಚ್‌.​ಎ​ಸ್‌.​ಪ್ರ​ಣ​ಯ್‌ ಮಲೇಷ್ಯಾ ಮಾಸ್ಟ​ರ್‍ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನ​ಲ್‌ ಪ್ರವೇ​ಶಿ​ಸಿ​ದ್ದಾ​ರೆ. ಆದ​ರೆ 2 ಬಾರಿ ಚಾಂಪಿ​ಯನ್‌ ಪಿ.ವಿ.​ಸಿಂಧು ಸೆಮಿ​ಫೈ​ನ​ಲ್‌​ನಲ್ಲಿ ಅಭಿ​ಯಾನ ಕೊನೆ​ಗೊ​ಳಿ​ಸಿ​ದ್ದಾರೆ.

ಶನಿ​ವಾರ ಪುರು​ಷರ ಸಿಂಗಲ್ಸ್‌ ಸೆಮೀ​ಸ್‌ ಪಂದ್ಯ​ದಲ್ಲಿ ತಮ್ಮ ಎದು​ರಾಳಿ, ಇಂಡೋ​ನೇ​ಷ್ಯಾದ ಕ್ರಿಸ್ಟಿ​ಯನ್‌ ಅಡಿ​ನ​ಟಾ ಗಾಯ​ಗೊಂಡ ಕಾರಣ ವಿಶ್ವ ನಂ.9 ಪ್ರಣಯ್‌ ಫೈನ​ಲ್‌ಗೆ ಅರ್ಹ​ತೆ ಪಡೆ​ದರು. 2019ರ ಕಿರಿ​ಯರ ವಿಶ್ವ ಚಾಂಪಿ​ಯ​ನ್‌​ಶಿಪ್‌ ವಿಜೇತ ಕ್ರಿಸ್ಟಿ​ಯನ್‌ ವಿರುದ್ಧ ಮೊದಲ ಗೇಮ್‌​ನಲ್ಲಿ ಪ್ರಣಯ್‌ 19-17ರಲ್ಲಿ ಮುನ್ನ​ಡೆ​ಯ​ಲ್ಲಿ​ದ್ದರು. ಫೈನ​ಲ್‌​ನಲ್ಲಿ ಪ್ರಣಯ್‌ ಚೀನಾದ ವೆಂಗ್‌ ಹೊಂಗ್‌ರನ್ನು ಎದು​ರಿ​ಸ​ಲಿ​ದ್ದಾರೆ. ಇನ್ನು, ಮಹಿಳಾ ಸಿಂಗಲ್ಸ್‌ ಸೆಮೀ​ಸ್‌​ನಲ್ಲಿ ಸಿಂಧು ಇಂಡೋ​ನೇ​ಷ್ಯಾದ ಗ್ರೆಗೋ​ರಿಯಾ ಮಾರಿಸ್ಕಾ ವಿರುದ್ಧ 14-21, 17-21ರಲ್ಲಿ ಸೋತರು. ಮಾರಿಸ್ಕಾ ವಿರುದ್ಧ ಸಿಂಧುಗೆ ಇದು ಸತತ 2ನೇ ಸೋಲು.

ಗ್ರ್ಯಾನ್‌​ ಪ್ರಿ: ಸ್ಟೀಪ​ಲ್‌​ಚೇ​ಸ್‌ ಕಂಚು ಜಯಿ​ಸಿದ ಪಾರು​ಲ್‌

ಲಾಸ್‌ ಏಂಜ​ಲೀ​ಸ್‌: ಭಾರ​ತದ ತಾರಾ ಅಥ್ಲೀಟ್‌ ಪಾರುಲ್‌ ಚೌಧರಿ ಲಾಸ್‌ ಏಂಜ​ಲೀಸ್‌ ಗ್ರ್ಯಾನ್‌ಪ್ರಿ ಕೂಟ​ದ ಮಹಿ​ಳೆ​ಯರ 3000 ಮೀ. ಸ್ಟೀಪ​ಲ್‌​ಚೇ​ಸ್‌​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಜೊತೆ​ಗೆ ಏಷ್ಯಾದ 10ನೇ ವೇಗದ ಸ್ಟೀಪ​ಲ್‌​ಚೇಸ್‌ ಪಟು ಎಂಬ ಖ್ಯಾತಿ​ಗೆ ಪಾತ್ರ​ರಾ​ಗಿ​ದ್ದಾ​ರೆ. ಶುಕ್ರವಾರ ಪಾರುಲ್‌ 9 ನಿಮಿಷ 29.51 ಸೆಕೆಂಡ್‌​ಗ​ಳಲ್ಲಿ ಗುರಿ ತಲುಪಿ 3ನೇ ಸ್ಥಾನಿ​ಯಾ​ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಪ್ರದ​ರ್ಶನ. ಅಲ್ಲದೇ ಈವ​ರೆಗೆ 3000ಮೀ. ಸ್ಟೀಪ​ಲ್‌​ಚೇ​ಸ್‌​ನಲ್ಲಿ 9:30 ನಿಮಿ​ಷ​ದೊಳ​ಗೆ ಕ್ರಮಿ​ಸಿದ ಭಾರ​ತ​ದ 3ನೇ ಅಥ್ಲೀಟ್‌ ಎನಿ​ಸಿ​ಕೊಂಡರು.
 

Follow Us:
Download App:
  • android
  • ios