ಮಹಿಳೆಯರ ವಿಭಾಗದಲ್ಲಿ ಯಾವುದೇ ಹೆಸರನ್ನು ಶಿಫಾರಸು ಮಾಡದಿರಲು ಕುಸ್ತಿ ಫೆಡರೇಶನ್ ತೀರ್ಮಾನಿಸಿದೆ.

ನವದೆಹಲಿ(ಮೇ.07): ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಯುವ ಕುಸ್ತಿಪಟುಗಳಾದ ಸಂದೀಪ್ ತೋಮರ್ ಹಾಗೂ ಹರ್'ದೀಪ್ ಸಿಂಗ್ ಅವರ ಹೆಸರುಗಳನ್ನು ಭಾರತೀಯ ಕುಸ್ತಿ ಫೆಡರೇಶನ್ ಶಿಫಾರಸು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ರೀ ಸ್ಟೈಲ್ ಕುಸ್ತಿಪಟುವಾಗಿರುವ ಸಂದೀಪ್ ಕಳೆದ ಬಾರಿ ಕಾಮನ್'ವೆಲ್ತ್ ಹಾಗೂ ಏಷ್ಯಾ ಚಾಂಪಿಯನ್'ಶಿಪ್'ಗಳಲ್ಲಿ ಪದಕ ಗೆದ್ದಿದ್ದರು. ಇದೇವೇಳೆ ಗ್ರೀಕೊ-ರೋಮನ್ ವಿಭಾಗದಲ್ಲಿ ಹರ್'ದೀಪ್ ಏಷ್ಯಾ ಚಾಂಪಿಯನ್'ಶಿಪ್'ನಲ್ಲಿ ಬೆಳ್ಳಿ ಹಾಗೂ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಆದರೆ ಮಹಿಳೆಯರ ವಿಭಾಗದಲ್ಲಿ ಯಾವುದೇ ಹೆಸರನ್ನು ಶಿಫಾರಸು ಮಾಡದಿರಲು ಕುಸ್ತಿ ಫೆಡರೇಶನ್ ತೀರ್ಮಾನಿಸಿದೆ.

ಇನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ರಾಷ್ಟ್ರೀಯ ಕೋಚ್ ಕುಲ್ದೀಪ್ ಮಲ್ಲೀಕ್ ಹೆಸರನ್ನು ನಾಮನಿರ್ದೆಶನ ಮಾಡಲಾಗಿದೆ. ಇದರ ಜತೆಗೆ ಡಬ್ಲ್ಯೂಎಫ್ಐ ಧ್ಯಾನ್ ಚಂದ್ ಪ್ರಶಸ್ತಿಗೆ ಸತೀಶ್ ಕುಮಾರ್, ಜೈ ಪ್ರಕಾಶ್ ,ಅನಿಲ್ ಕುಮಾರ್ ಮತ್ತು ಆರ್'ಸಿ ಸಾರಂಗ್ ಹೆಸರನ್ನು ಸೂಚಿಸಿದೆ.