Wrestlers Protest: ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ ಕುಸ್ತಿಪಟುಗಳು!

ಬ್ರಿಜ್‌ಭೂಷಣ್ ವಿರುದ್ದ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಜಂತ​ರ್‌​ ಮಂತ​ರ್‌​ನಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಣೆ
18ನೇ ದಿನ ಪೂರೈಸಿದ ಕುಸ್ತಿಪಟುಗಳ ಪ್ರತಿಭಟನೆ
 

Wrestlers Protest With Black Bands Against WFI Chief Brij Bhushan Singh kvn

ನವ​ದೆ​ಹ​ಲಿ(ಮೇ.12): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ಜಂತ​ರ್‌​ ಮಂತ​ರ್‌​ನಲ್ಲಿ ಕುಸ್ತಿ​ಪ​ಟು​ಗಳು ನಡೆ​ಸು​ತ್ತಿ​ರುವ ಧರಣಿ 18 ದಿನ ಪೂರೈಸಿದೆ. ಗುರು​ವಾರ ಹೋರಾಟ ನಿರ​ತರು ಕಪ್ಪು ಪಟ್ಟಿಧರಿಸಿ ಕರಾಳ ದಿನ ಆಚರಿಸಿದರು.

ಕುಸ್ತಿ​ಪ​ಟು​ಗ​ಳಾದ ಭಜ​ರಂಗ್‌, ಸಾಕ್ಷಿ, ವಿನೇಶ್‌ ಸೇರಿ​ದಂತೆ ಪ್ರಮು​ಖರು ಹಣೆಗೆ ಕಪ್ಪು ಪಟ್ಟಿ ಧರಿ​ಸಿ​ದರೆ, ಇತರರು ತೋಳಿಗೆ ಪಟ್ಟಿ ಧರಿಸಿ ಹೋರಾ​ಟಕ್ಕೆ ಬೆಂಬಲ ಸೂಚಿ​ಸಿ​ದರು. ‘ಬ್ರಿಜ್‌ ವಿರು​ದ್ಧದ ಹೋರಾ​ಟದ ಭಾಗ​ವಾಗಿ ಕರಾಳ ದಿನ ಆಚ​ರಿ​ಸಿ​ದ್ದೇವೆ. ಈಗ ಇಡೀ ದೇಶವೇ ನಮ್ಮ ಜೊತೆ​ಗಿ​ದ್ದು, ಹೋರಾ​ಟ​ದಲ್ಲಿ ಗೆಲುವು ನಮ್ಮ​ದಾ​ಗ​ಲಿ​ದೆ. ಗೆಲ್ಲು​ವ​ವ​ರೆಗೂ ಹೋರಾಟ ಕೈಬಿ​ಡುದಿಲ್ಲ​’ ಎಂದು ಭಜ​ರಂಗ್‌ ಹೇಳಿ​ದರು.

ಹೇಳಿಕೆ ದಾಖಲಿಸಿದ ಅಪ್ರಾಪ್ತೆ: ಇದೇ ವೇಳೆ ಬ್ರಿಜ್‌ ವಿರುದ್ಧ ಆರೋ​ಪ​ಗ​ಳಿಗೆ ಸಂಬಂಧಿ​ಸಿ​ ಅಪ್ರಾಪ್ತ ಕುಸ್ತಿ​ಪ​ಟು ಗುರು​ವಾರ ಮ್ಯಾಜಿ​ಸ್ಪ್ರೇಟ್‌ ಮುಂದೆ ಹೇಳಿಕೆ ದಾಖ​ಲಿ​ಸಿ​ದರು. ಉಳಿದ 6 ಮಂದಿಯ ಹೇಳಿಕೆ ಇನ್ನಷ್ಟೇ ದಾಖ​ಲಾ​ಗ​ಬೇ​ಕಿದೆ ಎಂದು ಹಿರಿಯ ಪೊಲೀಸ್‌ ಅಧಿ​ಕಾ​ರಿ​ಯೊ​ಬ್ಬರು ಮಾಹಿತಿ ನೀಡಿ​ದ್ದಾರೆ. ಇತ್ತೀ​ಚೆಗೆ 7 ಮಂದಿ ಡೆಲ್ಲಿ ಪೊಲೀ​ಸ​ರಿಗೆ ಬ್ರಿಜ್‌ ವಿರುದ್ಧ ದೂರು ನೀಡಿ​ದ್ದರು.

ಬ್ರಿಜ್‌ರ ಮಂಪರು ಪರೀ​ಕ್ಷೆಗೆ ತಾರಾ ಕುಸ್ತಿ​ಪ​ಟು​ಗಳ ಆಗ್ರ​ಹ!

ನವ​ದೆ​ಹ​ಲಿ: ಲೈಂಗಿಕ ಕಿರು​ಕುಳ ಸೇರಿ​ದಂತೆ ಕುಸ್ತಿ​ಪ​ಟು​ಗಳ ಗಂಭೀರ ಆರೋ​ಪ​ಗ​ಳನ್ನು ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಬ್ರಿಜ್‌ಭೂಷಣ್‌ ಸಿಂಗ್‌ ನಿರಾ​ಕ​ರಿ​ಸು​ತ್ತಿದ್ದು, ಹೀಗಾಗಿ ಅವ​ರನ್ನು ಸುಪ್ರೀಂಕೋರ್ಚ್‌ ಮೇಲ್ವಿಚಾರಣೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿ​ಸ​ಬೇ​ಕೆಂದು ಕುಸ್ತಿ​ಪ​ಟು​ಗಳು ಆಗ್ರ​ಹಿ​ಸಿ​ದ್ದಾರೆ. ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಕುಸ್ತಿ​ಪಟು ಸಾಕ್ಷಿ ಮಲಿ​ಕ್‌, ‘ಜನರು ನಾವು ಸುಳ್ಳು ಆರೋಪ ಹೊರಿ​ಸಿ​ದ್ದೇ​ವೆ ಎಂದು ಹೇಳು​ತ್ತಿ​ದ್ದಾರೆ. ಹೀಗಾಗಿ ಬ್ರಿಜ್‌ ಮಂಪರು ಪರೀ​ಕ್ಷೆಗೆ ಒಳ​ಗಾ​ಗಲಿ. ದೂರು ನೀಡಿರುವ 7 ಕುಸ್ತಿಪಟುಗಳೂ ಪರೀಕ್ಷೆಗೆ ಒಳಪಡಲಿ. ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ತಪ್ಪಿ​ತ​ಸ್ಥ​ರನ್ನು ಗಲ್ಲಿ​ಗೇ​ರಿ​ಸಲಿ’ ಎಂದು ಸವಾಲು ಹಾಕಿದ್ದಾರೆ. 

ಬಾಸ್ಕೆಟ್‌ಬಾಲ್‌ ಬಿಟ್ಟು ಶೂಟರ್‌ ಆದ ದಿವ್ಯಾ; ದೇಶಕ್ಕೆ ಚಿನ್ನ ಗೆದ್ದ ರಾಜ್ಯದ ಪ್ರತಿಭೆ

ಟೂರ್ನಿ ನಡೆ​ಯ​ಲಿ: ಇದೇ ವೇಳೆ ಒಲಿಂಪಿಕ್ಸ್‌ ಪದಕ ವಿಜೇತ ಭಜ​ರಂಗ್‌ ಪೂನಿಯಾ ರಾಷ್ಟ್ರೀಯ ಟೂರ್ನಿ​ಗ​ಳನ್ನು ಆಯೋ​ಜಿ​ಸ​ಬೇಕು ಎಂದು ಮನವಿ ಮಾಡಿ​ದ್ದಾ​ರೆ. ‘ನಾವು ಯಾವುದೇ ಟೂರ್ನಿ ಆಯೋ​ಜ​ನೆಯನ್ನು ವಿರೋ​ಧಿ​ಸು​ತ್ತಿಲ್ಲ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಯು ಟೂರ್ನಿ ನಡೆ​ಸಲಿ. ಆದರೆ ಟೂರ್ನಿ ಆಯೋಜನೆಯಲ್ಲಿ ಬ್ರಿಜ್‌ಭೂಷಣ್‌ರ ಹಸ್ತಕ್ಷೇಪವಿರಬಾರದು’ ಎಂದಿ​ದ್ದಾರೆ.

ಭಾರತದ ಬಾಕ್ಸರ್‌ಗಳಿಗೆ ಫೈನಲ್‌ಗೇರುವ ಗುರಿ

ತಾಷ್ಕೆಂಟ್‌: ಪುರು​ಷರ ಬಾಕ್ಸಿಂಗ್‌ ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಭಾರ​ತದ ಮೂವರು ಶುಕ್ರ​ವಾರ ಸೆಮಿ​ಫೈ​ನ​ಲ್‌​ನಲ್ಲಿ ಕಣ​ಕ್ಕಿ​ಳಿ​ಯ​ಲಿದ್ದು, ಫೈನಲ್‌ ಪ್ರವೇ​ಶಿಸಿ ಐತಿ​ಹಾ​ಸಿಕ ದಾಖಲೆ ಬರೆ​ಯುವ ನಿರೀ​ಕ್ಷೆ​ಯ​ಲ್ಲಿದ್ದಾರೆ. ಈವ​ರೆ​ಗಿನ ಯಾವುದೇ ಕೂಟ​ದಲ್ಲೂ ಭಾರತದ ಮೂವರು ಸೆಮೀ​ಸ್‌​ ಪ್ರವೇಶಿಸಿರಲಿಲ್ಲ. ಭಾರತ ಈವ​ರೆಗೆ ಒಟ್ಟಾರೆ 6 ಕಂಚು ಗೆದ್ದಿದ್ದು, 2019ರಲ್ಲಿ ಏಕೈ​ಕ ಬೆಳ್ಳಿ ಪದಕ ಜಯಿ​ಸಿತ್ತು.

ಶುಕ್ರ​ವಾರ 51 ಕೆ.ಜಿ. ವಿಭಾಗದಲ್ಲಿ ದೀಪ​ಕ್‌ 2 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ, ಫ್ರಾನ್ಸ್‌​ನ ಬಿಲಾಲಾ ಬೆನ್ನಾಮ ವಿರುದ್ಧ ಆಡ​ಲಿದ್ದು, ಕಳೆದ ಬಾರಿ ಕಂಚು ಗೆದ್ದಿದ್ದ ಹುಸ್ಮು​ದ್ದೀ​ನ್‌​57 ಕೆ.ಜಿ. ವಿಭಾಗದಲ್ಲಿ ಕ್ಯೂಬಾದ ಹೊರ್ಟಾ ವಿರುದ್ಧ ಸೆಣಸಲಿದ್ದಾರೆ. 71 ಕೆ.ಜಿ. ವಿಭಾಗದಲ್ಲಿ ನಿಶಾಂತ್‌ ದೇವ್‌, 2022ರ ಏಷ್ಯನ್‌ ಚಾಂಪಿ​ಯನ್‌, ಕಜ​ಕ​ಸ್ತಾ​ನದ ಅಸ್ಲ​ನ್‌​ಬೆಕ್‌ರನ್ನು ಎದು​ರಿ​ಸ​ಲಿ​ದ್ದಾ​ರೆ.

ಎಎ​ಫ್‌ಸಿ ಏಷ್ಯನ್‌ ಕಪ್‌: ‘ಬಿ’ ಗುಂಪಿ​ನಲ್ಲಿ ಭಾರ​ತ

ನವ​ದೆ​ಹ​ಲಿ: ಕತಾ​ರ್‌​ನಲ್ಲಿ ನಡೆ​ಯ​ಲಿ​ರುವ 2024ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ತಂಡ ‘ಬಿ’ ಗುಂಪಿ​ನಲ್ಲಿ ಜೊತೆ ಸ್ಥಾನ ಗಿಟ್ಟಿ​ಸಿ​ಕೊಂಡಿದೆ. 24 ತಂಡ​ಗಳು ಪಾಲ್ಗೊ​ಳ್ಳುವ ಟೂರ್ನಿ​ಯಲ್ಲಿ ತಲಾ 4 ತಂಡ​ಗಳ 6 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಭಾರತ ತಂಡವು ಗುಂಪು ಹಂತದಲ್ಲಿ ಬಲಿ​ಷ್ಠ ಆಸ್ಪ್ರೇ​ಲಿಯಾ, ಉಜ್ಬೇ​ಕಿಸ್ತಾನ, ಸಿರಿಯಾ ತಂಡ​ಗಳ ವಿರುದ್ಧ ಸೆಣಸಲಿದೆ. ಈ ಮೂರೂ ತಂಡಗಳು ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮೇಲಿವೆ. 1964ರಲ್ಲಿ ರನ್ನ​ರ್‌-ಅಪ್‌ ಆಗಿದ್ದು ಭಾರ​ತದ ಈವ​ರೆ​ಗಿನ ಶ್ರೇಷ್ಠ ಪ್ರದ​ರ್ಶನ ಎನಿಸಿದೆ.

Latest Videos
Follow Us:
Download App:
  • android
  • ios