Asianet Suvarna News Asianet Suvarna News

Wrestlers Protest ಹೊಸ ಪಾರ್ಲಿಮೆಂಟ್‌ಗೆ ಘೇರಾವ್‌ ಹಾಕಲು ಹೊರಟ ಕುಸ್ತಿಪಟುಗಳ ಸೆರೆ

ಜಂತರ್‌ ಮಂತರ್‌ನಲ್ಲಿ ಹೈಡ್ರಾಮಾ
ಬ್ರಿಜ್‌ಭೂಷಣ್‌ ಬಂಧನಕ್ಕೆ ಪಟ್ಟು
ಸಂಜೆ ಮಹಿಳಾ ರೆಸ್ಲರ್‌ಗಳ ಬಿಡುಗಡೆ
 

Wrestlers Detained Trying To March To New Parliament kvn
Author
First Published May 29, 2023, 11:44 AM IST

ನವ​ದೆ​ಹ​ಲಿ(ಮೇ.29): ಲೈಂಗಿಕ ಕಿರು​ಕುಳ ಪ್ರಕ​ರ​ಣ​ದಲ್ಲಿ 2 ಎಫ್‌​ಐ​ಆರ್‌ ದಾಖ​ಲಾ​ದರೂ ಭಾರತೀಯ ಕುಸ್ತಿ ಫೆಡ​ರೇ​ಶ​ನ್‌​ (​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ರನ್ನು ಇನ್ನೂ ಬಂಧಿ​ಸದಿ​ರು​ವು​ದನ್ನು ಪ್ರಶ್ನಿಸಿ ಭಾನು​ವಾರ ನೂತನ ಸಂಸತ್‌ ಭವ​ನಕ್ಕೆ ಮುತ್ತಿಗೆ ಹಾಕುವ ಕುಸ್ತಿ​ಪ​ಟು​ಗ​ಳ ಪ್ರಯತ್ನ ಭಾರೀ ಹೈಡ್ರಾಮಾಕ್ಕೆ ಕಾರ​ಣ​ವಾ​ಗಿದೆ. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್‌ ಭವ​ನ ಉದ್ಘಾ​ಟಿ​ಸಿದ ದಿನವೇ ಒಲಿಂಪಿಕ್‌ ಸಾಧ​ಕ​ರನ್ನು ನಡು ರಸ್ತೆಯಲ್ಲೇ ಬಂಧಿ​ಸಿದ ಘಟನೆಗೆ ತೀವ್ರ ಆಕ್ರೋ​ಶ ಕೂಡಾ ವ್ಯಕ್ತ​ವಾ​ಗಿ​ದೆ.

ಬ್ರಿಜ್‌ಭೂಷಣ್‌ ಬಂಧ​ನ​ಕ್ಕಾಗಿ ಪಾರ್ಲಿ​ಮೆಂಟ್‌ ಮುಂಭಾ​ಗ ‘ಮಹಾ​ ಪಂಚಾ​ಯತ್‌’ ಹೆಸ​ರಿ​ನಲ್ಲಿ ಬೃಹತ್‌ ಹೋರಾಟ ಸಂಘ​ಟಿ​ಸಲು ನಿರ್ಧ​ರಿ​ಸಿ ಭಾನು​ವಾರ ಮುಂಜಾನೆ ಜಂತರ್‌ ಮಂತ​ರ್‌​ನಿಂದ ಮೆರ​ವ​ಣಿಗೆ ಆರಂಭಿ​ಸಿದ ಕುಸ್ತಿ​ಪ​ಟು​ಗ​ಳನ್ನು ಮಾರ್ಗ ಮಧ್ಯೆಯೇ ಪೊಲೀ​ಸರು ತಡೆ​ದಿ​ದ್ದಾರೆ. ಈ ವೇಳೆ ಕುಸ್ತಿ​ಪ​ಟು​ಗಳು ಹಾಗೂ ಪೊಲೀ​ಸರ ನಡುವೆ ಸಂಘರ್ಷ ಏರ್ಪ​ಟ್ಟಿದ್ದು, ಭಜ​ರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌, ವಿನೇಶ್‌ ಫೋಗಾಟ್‌ ಸೇರಿ​ದಂತೆ ಹಲ​ವ​ರನ್ನು ಪೊಲೀಸರು ತಮ್ಮ ವಾಹ​ನ​ಗ​ಳಲ್ಲಿ ಕರೆ​ದೊ​ಯ್ದಿ​ದ್ದಾರೆ. ಬಳಿಕ ಜಂತರ್‌ ಮಂತ​ರ್‌​ನ ಪ್ರತಿ​ಭ​ಟನಾ ಸ್ಥಳ​ವನ್ನೂ ಪೊಲೀ​ಸರು ತೆರ​ವು​ಗೊ​ಳಿ​ಸಿದ್ದು, ಅಲ್ಲಿದ್ದ ಬೆಡ್‌, ಕೂಲರ್‌ ಸೇರಿ​ದಂತೆ ಇತರ ವಸ್ತು​ಗ​ಳನ್ನು ವಶಕ್ಕೆ ಪಡೆ​ದು​ಕೊಂಡಿ​ದ್ದಾರೆ. ಸಂಜೆಯ ವೇಳೆಗೆ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬಂಧನಕ್ಕೆ ತೀವ್ರ ಖಂಡ​ನೆ:

ಪ್ರತಿ​ಭ​ಟನಾನಿರತರು ರಸ್ತೆಗೆ ಬಿದ್ದಿ​ರುವ, ಅವ​ರನ್ನು ಪೊಲೀ​ಸರು ಎಳೆ​ದಾ​ಡು​ತ್ತಿ​ರುವ ಫೋಟೋ, ವಿಡಿ​ಯೋ​ಗ​ಳು ಭಾರೀ ವೈರಲ್‌ ಆಗಿವೆ. ಅದಕ್ಕೆ ವಿವಿಧ ರಾಜ​ಕೀಯ ಪಕ್ಷ​ಗಳ ನಾಯ​ಕರು ತೀವ್ರ ಖಂಡನೆ ವ್ಯಕ್ತ​ಪ​ಡಿ​ಸಿ​ದ್ದಾರೆ. ‘ಪ​ಟ್ಟಾ​ಭಿ​ಷೇಕ ಮುಗಿ​ದಿದೆ. ದುರ​ಹಂಕಾರಿ ರಾಜ ಪ್ರಜೆ​ಗಳ ಧ್ವನಿ ಅಡ​ಗಿ​ಸು​ತ್ತಿ​ದ್ದಾ​ನೆ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಕಿಡಿ​ಕಾ​ರಿ​ದ್ದಾರೆ. ಒಲಿಂಪಿಕ್ಸ್‌ ಚಾಂಪಿ​ಯನ್‌ ನೀರಜ್‌ ಚೋಪ್ರಾ, ‘ಘ​ಟ​ನೆ​ಯಿಂದ ನೋವಾ​ಗಿದೆ. ಕುಸ್ತಿ​ಪ​ಟು​ಗ​ಳನ್ನು ಚೆನ್ನಾಗಿ ನಡೆ​ಸಿ​ಕೊ​ಳ್ಳ​ಬ​ಹು​ದಿ​ತ್ತು’ ಎಂದು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ದೇಶ ವಿರೋಧಿ ಕೃತ್ಯ:

ಘಟನೆ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ದೆಹಲಿ ಪೊಲೀಸ್‌ ಅಧಿ​ಕಾರಿ ದೀಪೇಂದ್ರ ಪಾಠಕ್‌, ‘ಉದ್ಘಾ​ಟನೆ ದಿನವೇ ಸಂಸತ್‌ ಭವನಕ್ಕೆ ಮಾಚ್‌ರ್‍ ನಡೆ​ಸು​ವುದು ದೇಶ ವಿರೋಧಿ ಕೃತ್ಯ. ಹೀಗಾಗಿ ಕುಸ್ತಿ​ಪ​ಟು​ಗಳ ಮೆರ​ವ​ಣಿ​ಗೆಗೆ ಅವ​ಕಾ​ಶ​ವಿಲ್ಲ. ನಿಯಮ ಉಲ್ಲಂಘಿ​ಸಿ​ದ್ದಕ್ಕೆ ಅವ​ರನ್ನು ಬಂಧಿ​ಸಿ​ದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊ​ಳ್ಳು​ತ್ತೇ​ವೆ’ ಎಂದಿ​ದ್ದಾ​ರೆ.

ನಾವು ಮಾಡಿದ ತಪ್ಪೇ​ನು?:

ಪೊಲೀ​ಸರು ತಮ್ಮನ್ನು ಬಂಧಿ​ಸಿ​ದ್ದಕ್ಕೆ ಕಿಡಿ​ಕಾ​ರಿದ ವಿನೇಶ್‌, ‘ನವ ಭಾರ​ತಕ್ಕೆ ಸ್ವಾಗತ. ಇಲ್ಲಿ ಅ​ಪ​ರಾ​ಧಿ​ಗಳು ಮುಕ್ತ​ವಾಗಿ ಓಡಾ​ಡು​​ತ್ತಿ​ದ್ದಾರೆ. ದೇಶ​ಕ್ಕಾಗಿ ಪದಕ ಗೆದ್ದ​ವರನ್ನು ನ್ಯಾಯ ಕೇಳಿ​ದ್ದಕ್ಕೆ ಬಂಧಿಸಿ ಜೈಲಲ್ಲಿ ಇಡು​ತ್ತಿ​ದ್ದಾರೆ. ಯಾವು​ದಾ​ದರೂ ಸರ್ಕಾರ ಚಾಂಪಿ​ಯನ್‌ ಅಥ್ಲೀ​ಟ್‌​ಗಳ ಜೊತೆ ಈ ರೀತಿ ವರ್ತಿ​ಸಿ​ದೆ​ಯೇ? ನಾವು ಮಾಡಿದ ಅಪ​ರಾ​ಧ​ವಾ​ದರೂ ಏನು? ಲೈಂಗಿಕ ಕಿರು​ಕುಳ ಆರೋಪಿ ಬ್ರಿಜ್‌​ಭೂ​ಷಣ್‌ ಪಾರ್ಲಿ​ಮೆಂಟ್‌​ನಲ್ಲಿದ್ದರೆ, ನಮ್ಮನ್ನು ರಸ್ತೆ​ಯಲ್ಲಿ ಎಳೆ​ದೊ​ಯ್ಯು​ತ್ತಿ​ದ್ದಾರೆ. ವಿಶ್ವವೇ ನಮ್ಮನ್ನು ನೋಡು​ತ್ತಿ​ದೆ. ಇದು ಭಾರ​ತೀಯ ಕ್ರೀಡೆಯ ಕರಾಳ ದಿನ​’ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಅಲ್ಲದೆ ಸರ್ಕಾರದ ಇಂಥ ಕ್ರಮದ ಹೊರತಾಗಿಯೂ ತಾವು ಜಂತರ್‌ ಮಂತರ್‌ನಲ್ಲೇ ಪ್ರತಿಭಟನೆ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

Follow Us:
Download App:
  • android
  • ios