ನನ್ನ ವಿರುದ್ಧ ಕುಸ್ತಿ ಫೆಡರೇಶನ್ ಷಡ್ಯಂತ್ರ: ವಿನೇಶ್ ಫೋಗಟ್ ಗಂಭೀರ ಆರೋಪ
‘ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುವುದನ್ನು ತಡೆಯಲು ಡಬ್ಲ್ಯುಎಫ್‌ಐ ಸಕಲ ಪ್ರಯತ್ನ ನಡೆಸುತ್ತಿದೆ. ಒಲಿಂಪಿಕ್ ಅರ್ಹತಾ ಟೂರ್ನಿಗೆ ನನ್ನ ವೈಯಕ್ತಿಕ ಕೋಚ್‌ಗಳನ್ನು ಕರೆದೊಯ್ಯಲು ಅಡ್ಡಿ ಮಾಡಲಾಗುತ್ತಿದೆ. ಡಬ್ಲ್ಯುಎಫ್‌ಐ ತನ್ನ ಹಿಡಿತದಲ್ಲಿರುವ ಕೋಚ್‌ಗಳನ್ನು ಬಳಸಿಕೊಂಡು ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದರೂ ಅಚ್ಚರಿಯಿಲ್ಲ’ ಎಂದು ವಿನೇಶ್ ಹೇಳಿದ್ದಾರೆ.
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿರುದ್ಧ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಮತ್ತೊಂದು ಹೊಸ ಆರೋಪ ಮಾಡಿದ್ದಾರೆ. ತಾವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಂತೆ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಿನೇಶ್ ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ.
‘ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುವುದನ್ನು ತಡೆಯಲು ಡಬ್ಲ್ಯುಎಫ್‌ಐ ಸಕಲ ಪ್ರಯತ್ನ ನಡೆಸುತ್ತಿದೆ. ಒಲಿಂಪಿಕ್ ಅರ್ಹತಾ ಟೂರ್ನಿಗೆ ನನ್ನ ವೈಯಕ್ತಿಕ ಕೋಚ್‌ಗಳನ್ನು ಕರೆದೊಯ್ಯಲು ಅಡ್ಡಿ ಮಾಡಲಾಗುತ್ತಿದೆ. ಡಬ್ಲ್ಯುಎಫ್‌ಐ ತನ್ನ ಹಿಡಿತದಲ್ಲಿರುವ ಕೋಚ್‌ಗಳನ್ನು ಬಳಸಿಕೊಂಡು ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದರೂ ಅಚ್ಚರಿಯಿಲ್ಲ’ ಎಂದು ವಿನೇಶ್ ಹೇಳಿದ್ದಾರೆ.
IPL 2024 ಕುಲ್ದೀಪ್, ಜೇಕ್ ಅಬ್ಬರಕ್ಕೆ ಬೆಚ್ಚಿದ ಲಖನೌ!
ಫೆಡರೇಶನ್ ಸ್ಪಷ್ಟನೆ: ವಿನೇಶ್‌ರ ಆರೋಪವನ್ನು ಡಬ್ಲ್ಯುಎಫ್‌ಐ ತಳ್ಳಿಹಾಕಿದೆ. ವೈಯಕ್ತಿಕ ಕೋಚ್‌ಗಳನ್ನು ಕರೆದೊಯ್ಯಬೇಕಿದ್ದರೆ ಮಾ.11ರೊಳಗೆ ವಿಶ್ವ ಕುಸ್ತಿ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕಿತ್ತು. ವಿನೇಶ್ ಮಾ.18ಕ್ಕೆ ಅರ್ಜಿ ಹಾಕಿದ್ದಾರೆ. ಹೀಗಾಗಿ ಮಾನ್ಯತೆ ದೊರೆತಿಲ್ಲ ಎಂದು ಡಬ್ಲ್ಯುಎಫ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಲಿಂಪಿಕ್ಸ್: ಭಾರತ ತಂಡದ ಮುಖ್ಯಸ್ಥೆ ಸ್ಥಾನ ಬಿಟ್ಟ ಮೇರಿ ಕೋಮ್
ನವದೆಹಲಿ: ವೈಯಕ್ತಿಕ ಕಾರಣಗಳಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಮುಖ್ಯಸ್ಥೆ ಹುದ್ದೆಯಿಂದ ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್ ಕೆಳಗಿಳಿದಿದ್ದಾರೆ. ಇಂತಹ ದೊಡ್ಡ ಅವಕಾಶವನ್ನು ಬಿಡುತ್ತಿರುವುದಕ್ಕೆ ಬಹಳ ಬೇಸರವಾಗುತ್ತಿದೆಯಾದರೂ, ಅನಿವಾರ್ಯ ಕಾರಣಗಳಿಂದ ತಾವು ತಂಡದೊಂದಿಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಮೇರಿ ಹೇಳಿದ್ದಾರೆ. ಸದ್ಯದಲ್ಲೇ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಹೇಳಿದ್ದಾರೆ.
RCB ಎದುರು ಮೋಸ ಮಾಡಿ ಪಂದ್ಯ ಗೆದ್ರಾ ಮುಂಬೈ ಇಂಡಿಯನ್ಸ್..? ಇಲ್ಲಿವೆ ನೋಡಿ 4 ಸಾಕ್ಷಿ..!
ಹಾಕಿ: ಭಾರತಕ್ಕೆ 1-3 ಸೋಲು
ಪರ್ತ್: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯ 4ನೇ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ 1-3 ಗೋಲುಗಳ ಸೋಲು ಅನುಭವಿಸಿತು. ಇದರೊಂದಿಗೆ ಸರಣಿಯಲ್ಲಿ 0-4ರ ಹಿನ್ನಡೆ ಅನುಭವಿಸಿದೆ. ಕಳೆದ 3 ಪಂದ್ಯಗಳಿಗೆ ಹೋಲಿಸಿದರೆ ಭಾರತದಿಂದ ಸುಧಾರಿತ ಆಟ ಮೂಡಿಬಂದರೂ, 3 ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟಿತು.
ಕೊಡವ ಹಾಕಿ: ಕೂತಂಡ, ಬಲ್ಲಚಂಡ ತಂಡಕ್ಕೆ ಜಯ
ನಾಪೋಕ್ಲು: ಕೊಡವ ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರ ಕೂತಂಡ ತಂಡ ಮೀದೆರಿರ ವಿರುದ್ಧ 4-0 ಅಂತರದ ಜಯ ಸಾಧಿಸಿತು. ಕರವಂಡ ವಿರುದ್ಧ ಬಲ್ಲಚಂಡ 2-0ಯಲ್ಲಿ ಗೆದ್ದರೆ, ಬಾಚನದಂಡ ತಂಡ ಕಳ್ಳಿಚಂಡ ವಿರುದ್ಧ ಪರಾಭವಗೊಂಡಿತು. ಕಳ್ಳಿಚಂಡ 4- 0ರಲ್ಲಿ ಬಾಚನದಂಡ ತಂಡವನ್ನು ಸೋಲಿಸಿತು. ಅಲ್ಲಂಡ ಮತ್ತು ಬೇಪಡಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆದು ಬಳಿಕ ಟೈ ಬ್ರೇಕರ್‌ನಲ್ಲಿ ಬೇಪಡಿಯಂಡ 4-3 ಅಂತರದಿಂದ ಗೆಲುವು ಸಾಧಿಸಿದರೆ, ಮೇಚಂಡ ವಿರುದ್ಧ ನಂಬುಡಮಾಡ 2-1 ಅಂತರದ ಗೆಲವು ಸಾಧಿಸಿತು.