ಇಂದು ನಡೆದ 74 ಕೆ.ಜಿ. ವಿಭಾಗ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಸುಶೀಲ್, ಜಿತೇಂದ್ರ ಕುಮಾರ್‌ರನ್ನು ಮಣಿಸಿದರು. 2010 ಹಾಗೂ 2014ರ ಕಾಮನ್‌'ವೆಲ್ತ್ ಗೇಮ್ಸ್‌'ನಲ್ಲಿ ಚಿನ್ನ ಗೆದ್ದಿದ್ದ ಸುಶೀಲ್, ಹ್ಯಾಟ್ರಿಕ್ ಬಾರಿಸುವ ವಿಶ್ವಾಸದಲ್ಲಿದ್ದಾರೆ.

ನವದೆಹಲಿ(ಡಿ.29): ಭಾರತದ ತಾರಾ ಕುಸ್ತಿಪಟು ಸುಶೀಲ್ ಕುಮಾರ್ ಸೇರಿದಂತೆ 6 ಮಂದಿ 2018ರ ಕಾಮನ್‌'ವೆಲ್ತ್ ಗೇಮ್ಸ್‌'ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಇಂದು ನಡೆದ 74 ಕೆ.ಜಿ. ವಿಭಾಗ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಸುಶೀಲ್, ಜಿತೇಂದ್ರ ಕುಮಾರ್‌ರನ್ನು ಮಣಿಸಿದರು. 2010 ಹಾಗೂ 2014ರ ಕಾಮನ್‌'ವೆಲ್ತ್ ಗೇಮ್ಸ್‌'ನಲ್ಲಿ ಚಿನ್ನ ಗೆದ್ದಿದ್ದ ಸುಶೀಲ್, ಹ್ಯಾಟ್ರಿಕ್ ಬಾರಿಸುವ ವಿಶ್ವಾಸದಲ್ಲಿದ್ದಾರೆ.

ಇಂದು ನಡೆದ ಆಯ್ಕೆ ಟ್ರಯಲ್ಸ್ ವೇಳೆ ಸುಶೀಲ್ ಕುಮಾರ್ ಹಾಗೂ ಅವರ ಸೆಮೀಸ್ ಎದುರಾಳಿ ಪ್ರವೀಣ್ ರಾಣಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಪಂದ್ಯದ ವೇಳೆ ಸುಶೀಲ್ ತಲೆಗೆ ಪ್ರವೀಣ್ ಬಲವಾಗಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಕೋಪಗೊಂಡ ಸುಶೀಲ್ ಬೆಂಬಲಿಗರು ಪ್ರವೀಣ್‌'ರ ಅಣ್ಣ ಹಾಗೂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ ಜೀವ ಬೆದರಿಕೆ ಸಹ ಹಾಕಿದ್ದಾರೆ ಎನ್ನಲಾಗಿದೆ.

Scroll to load tweet…