US Open 2022: ಸೆಮೀಸ್ಗೆ ಲಗ್ಗೆಯಿಟ್ಟ ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್
ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮೀಸ್ ಪ್ರವೇಶಿಸಿದ ಇಗಾ ಸ್ವಿಯಾಟೆಕ್
2022ರಲ್ಲಿ ಮೂರನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ಪೋಲೆಂಡ್ ಆಟಗಾರ್ತಿ
ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ಆಟಗಾರ್ತಿ ಎದುರು ಭರ್ಜರಿ ಗೆಲುವು
ನ್ಯೂಯಾರ್ಕ್(ಸೆ.08): ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.1 ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಇದೇ ಮೊದಲ ಬಾರಿಗೆ ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಮುಂಜಾನೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು 6-3, 7-6(7/4) ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಪೋಲೆಂಡ್ ಆಟಗಾರ್ತಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ
ಇದೀಗ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವಿಯಾಟೆಕ್, ಸೆಮಿಫೈನಲ್‌ನಲ್ಲಿ ಅರ್ಯನ ಸಬಾಲೆಂಕಾ ವಿರುದ್ದ ಕಾದಾಡಲಿದ್ದಾರೆ. ಸೆಮೀಸ್‌ನಲ್ಲಿ ಗೆಲುವು ಸಾಧಿಸಿದರೇ ಇಗಾ ಸ್ವಿಯಾಟೆಕ್, ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ. ಈ ಮೂಲಕ 2022ರಲ್ಲಿ ಇಗಾ ಸ್ವಿಯಾಟೆಕ್ ಮೂರನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ.
ಸೆಮೀಸ್ ಪ್ರವೇಶಿಸಿದ ಖಚನೋವ್, ರುಡ್
ವಿಂಬಲ್ಡನ್ ಫೈನಲ್‌ನಲ್ಲಿ ಎಡವಿದ್ದ ಆಸ್ಪ್ರೇಲಿಯಾದ ನಿಕ್ ಕಿರಿಯೋಸ್ ಯುಎಸ್ ಓಪನ್‌ನಲ್ಲೂ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದಾರೆ. ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಕಾರೆನ್ ಖಚನೊವ್ ವಿರುದ್ಧ 5-7, 6-4, 5-7, 7-6, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. 26 ವರ್ಷದ ಖಚನೊವ್ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಸೆಮಿಫೈನಲ್ ಪ್ರವೇಶಿಸಿದ್ದು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ 2021ರ ವಿಂಬಲ್ಡನ್ ರನ್ನರ್-ಅಪ್ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ 5ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್ ರುಡ್ 6-1, 6-4, 7-6 ಸೆಟ್‌ಗಳಲ್ಲಿ ಜಯಿಸಿ ಸೆಮೀಸ್‌ಗೇರಿದರು.
ಗಾಫ್‌ಗೆ ಸೋಲು: ಅಮೆರಿಕದ 18 ವರ್ಷದ ಕೊಕೊ ಗಾಫ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ವಿರುದ್ಧ 3-6, 4-6 ಸೆಟ್‌ಗಳಲ್ಲಿ ಸೋಲುಂಡರು. ಇನ್ನು ವಿಂಬಲ್ಡನ್ ರನ್ನರ್-ಅಪ್ ಟ್ಯುನೀಷಿಯಾದ ಒನ್ಸ್ ಜಬುರ್ ಆಸ್ಪ್ರೇಲಿಯಾದ ಆಲಾ ಟಾಮ್ಲಾನೊವಿಚ್ ವಿರುದ್ಧ 6-4, 7-6ರಲ್ಲಿ ಗೆದ್ದು ಸೆಮೀಸ್‌ಗೇರಿದರು.
ಬಾಸ್ಕೆಟ್‌ಬಾಲ್: ಕೊರಿಯಾ ವಿರುದ್ಧ ಸೋತ ಭಾರತ
ಬೆಂಗಳೂರು: ಫಿಬಾ ಅಂಡರ್-18 ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾರತ ಸತತ 2ನೇ ಸೋಲು ಅನುಭವಿಸಿದೆ. ಬುಧವಾರ ನಡೆದ ‘ಎ’ ಗುಂಪಿನ ‘ಎ’ ವಿಭಾಗದ 2ನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 47-69ರ ಅಂತರದಲ್ಲಿ ಸೋಲುಂಡಿತು. ಮೊದಲ ಕ್ವಾರ್ಟರಲ್ಲಿ 8-20ರಿಂದ ಹಿಂದಿದ್ದ ಭಾರತ, 2ನೇ ಹಾಗೂ 3ನೇ ಕ್ವಾರ್ಟರ್‌ನಲ್ಲೂ ಹಿನ್ನಡೆ ಅನುಭವಿಸಿತು. ಕೊನೆಯ ಕ್ವಾರ್ಟರಲ್ಲಿ 19-18ರ ಮುನ್ನಡೆ ಪಡೆದರೂ ಪ್ರಯೋಜನವಾಗಲಿಲ್ಲ. ಗುರುವಾರ 3ನೇ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಗಲಿದೆ.
US Open 2022: ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಹೋರಾಟ ಅಂತ್ಯ, ವರ್ಷದ ಮೊದಲ ಸೋಲು ಅನುಭವಿಸಿದ ರಾಫಾ..!
ಡೈಮಂಡ್ ಲೀಗ್ ಫೈನಲ್ಸ್: ಇಂದು ನೀರಜ್ ಕಣಕ್ಕೆ
ಝ್ಯೂರಿಚ್: ಒಲಿಂಪಿಕ್ ಚಾಂಪಿಯನ್, ಭಾರತದ ನೀರಜ್ ಚೋಪ್ರಾ ಗುರುವಾರ ಇಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಸ್ಪರ್ಧಿಸಲಿದ್ದು ಮತ್ತೊಂದು ಐತಿಹಾಸಿಕ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ. ಕಳೆದ ತಿಂಗಳು ಸ್ವಿಜರ್‌ಲೆಂಡ್‌ನ ಲುಸಾನ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದ ನೀರಜ್, ಫೈನಲ್ಸ್‌ನಲ್ಲೂ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ವಿಶ್ವದ ಅಗ್ರ 6 ಎಸೆತಗಾರರು ಸ್ಪರ್ಧಿಸಲಿದ್ದಾರೆ.
ಬ್ಯಾಡ್ಮಿಂಟನ್: ಅನುಪಮಾ ಕಿರಿಯರ ವಿಶ್ವ ನಂಬರ್ 1
ನವಹದೆಲಿ: ಭಾರತದ ಅನುಪಮಾ ಉಪಾಧ್ಯಾಯ ಅಂಡರ್-19 ಬ್ಯಾಡ್ಮಿಂಟನ್ ವಿಶ್ವ ರಾರಯಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಹರಾರಯಣ ಮೂಲದ 17 ವರ್ಷದ ಅನುಪಮಾ ಈ ವರ್ಷ ಉಗಾಂಡ ಹಾಗೂ ಪೋಲೆಂಡ್‌ಗಳಲ್ಲಿ ನಡೆದ ಕಿರಿಯರ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಜಯಗಳಿಸಿದ್ದರು. ಭಾರತದವರೇ ಆದ ತಸ್ನಿಮ್ ಮಿರ್ ಅವರನ್ನು ಮಂಗಳವಾರ ಹಿಂದಿಕ್ಕಿ ಅನುಪಮಾ ನಂ.1 ಸ್ಥಾನಕ್ಕೇರಿದ್ದಾರೆ.
ಅಗ್ರ 10ರಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ತಸ್ನಿಮ್ 2ನೇ ಸ್ಥಾನದಲ್ಲಿದ್ದು 14 ವರ್ಷದ ಅನ್ವೇಷಾ ಗೌಡ 6ನೇ, ಉನ್ನತಿ ಹೂಡಾ 9ನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ವಿಶ್ವ ಕಿರಿಯರ ರಾರಯಂಕಿಂಗ್(ಬಾಲಕ ಹಾಗೂ ಬಾಲಕಿ) ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ 6ನೇ ಭಾರತೀಯ ಶಟ್ಲರ್ ಎನ್ನುವ ಹಿರಿಮೆಗೆ ಅನುಪಮಾ ಪಾತ್ರರಾಗಿದ್ದಾರೆ.