ಮರ್ರೆ ಗಾಯದ ಸ್ವರೂಪ ಎಷ್ಟರ ಮಟ್ಟದ್ದು ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.

ಲಂಡನ್(ಜೂ.27): ವಿಶ್ವ ನಂಬರ್ 1 ಅಟಗಾರ ಬ್ರಿಟನ್‌'ನ ಆ್ಯಂಡಿ ಮರ್ರೆ ವಿಂಬ್ಡಲನ್ ಗ್ರ್ಯಾಂಡ್‌'ಸ್ಲಾಂ ಪಂದ್ಯಾವಳಿಗೂ ಮುನ್ನ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ಮಹತ್ವದ ಪಂದ್ಯಾವಳಿಗೆ ಅಭ್ಯಾಸ ನಡೆಸುವ ಸಲುವಾಗಿ ಮರ್ರೆ ಇಲ್ಲಿನ ಹರ್ಲಿಂಗ್‌'ಹ್ಯಾಮ್ ಕ್ಲಬ್‌'ನಲ್ಲಿ ಪ್ರದರ್ಶನ ಪಂದ್ಯವನ್ನು ಆಡಲು ನಿರ್ಧರಿಸಿದ್ದರು. ಆದರೆ ಇಂದು ಲೂಕಾಸ್ ಪೌಲಿ ವಿರುದ್ಧ ಆಡಬೇಕಿದ್ದ ಮರ್ರೆ, ಸೊಂಟದ ನೋವಿನ ಕಾರಣ ಕಣಕ್ಕಿಳಿಯದಿರಲು ನಿರ್ಧರಿಸಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಇನ್ನು ಶುಕ್ರವಾರ 2ನೇ ಪಂದ್ಯ ನಡೆಯಬೇಕಿದ್ದು, ಅದರಲ್ಲಿ ಪಾಲ್ಗೊಳ್ಳುವ ಬಗ್ಗೆ ಮರ್ರೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಹೀಗಾಗಿ ಮರ್ರೆ ಗಾಯದ ಸ್ವರೂಪ ಎಷ್ಟರ ಮಟ್ಟದ್ದು ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.