ಭಾರತ ತಂಡಕ್ಕೆ 2009ರಲ್ಲಿ ಹರ್ಮನ್‌'ಪ್ರೀತ್ ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.
ಮುಂಬೈ(ಸೆ.09): ಇತ್ತೀಚೆಗಷ್ಟೆ ಮುಕ್ತಾಯಗೊಂಡ ಮಹಿಳಾ ಏಕದಿನ ವಿಶ್ವಕಪ್'ನಲ್ಲಿ ಮಿಂಚಿದ್ದ ಭಾರತ ಆಟಗಾರ್ತಿ ಹರ್ಮನ್'ಪ್ರೀತ್ ಕೌರ್'ಗೆ ಪಶ್ಚಿಮ ರೈಲ್ವೆ ಇಲಾಖೆ ‘ಕ್ರೀಡಾ- ವಿಶೇಷ ಕರ್ತವ್ಯ ಅಧಿಕಾರಿ’ಯಾಗಿ ಬಡ್ತಿ ನೀಡಿದೆ.
2014ರಿಂದ ಹರ್ಮನ್'ಪ್ರೀತ್ ರೈಲ್ವೆ ಇಲಾಖೆಯಲ್ಲಿ ಮುಖ್ಯ ಕಚೇರಿಯ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆ.7ರಂದು ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಬಡ್ತಿ ನೀಡಲಾಗಿದೆ.
‘ಹರ್ಮನ್'ಪ್ರೀತ್ ಸಾಧನೆ ಗುರುತಿಸಿ ಅವರಿಗೆ ಬಡ್ತಿ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ರೈಲ್ವೆಯ ಪ್ರತಿ ಕ್ರೀಡಾಪಟುವಿಗೂ ಬಡ್ತಿ ನೀಡಿ, ಸನ್ಮಾನಿಸಲಾಗುವುದು’ ಎಂದು ಪಶ್ಚಿಮ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ತಂಡಕ್ಕೆ 2009ರಲ್ಲಿ ಹರ್ಮನ್'ಪ್ರೀತ್ ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.
