ಬೆಂಗಳೂರು(ಮೇ.20): ಐಪಿಎಲ್ ಟೂರ್ನಿ ಮುಗಿಸಿ ಇದೀಗ ವಿಶ್ವಕಪ್ ಟೂರ್ನಿಗೆ ಎಂ.ಎಸ್.ಧೋನಿ ಸಜ್ಜಾಗುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್‌ಗೊ ಕೊಂಡೊಯ್ದ ಧೋನಿ ಪ್ರಶಸ್ತಿ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲೂ ಇದೇ ಪ್ರದರ್ಶನ ನೀಡೋ  ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

2011ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಸ್ವತಃ ಧೋನಿ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಭಾರತಕ್ಕೆ 28 ವರ್ಷಗಳ ಬಳಿಕ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಇನ್ನು 2015ರಲ್ಲೂ ಭಾರತ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿತ್ತು. ಇದೀಗ 2019ರ ವಿಶ್ವಕಪ್ ಮತ್ತೆ ಬಂದಿದೆ.

ಈ ಬಾರಿ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ವರ್ಷಗಳ ಹಿಂದೆ ಧೋನಿ ಸ್ಥಾನದ ಕುರಿತು ತೀವ್ರ ಚರ್ಚೆಯಾಗಿತ್ತು. ಧೋನಿ ಕಳಪೆ ಫಾರ್ಮ್ ಟೀಕೆಗೂ  ಗುರಿಯಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಧೋನಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಟೀಕೆಗೆ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ ಟೀಕಾಕಾರರೇ ಇದೀಗ ಧೋನಿ ಇಲ್ಲದೇ ವಿಶ್ವಕಪ್ ಗೆಲುವು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದಲೇ ಹೊರಬಿತ್ತು.  ಆಧರೆ ಧೋನಿ ನಾಯಕತ್ವದ CSK ಫೈನಲ್ ಪ್ರವೇಶಿಸಿತ್ತು. ಇಲ್ಲಿದೆ ಧೋನಿ ಅದ್ಬುತ ನಾಯಕತ್ವ ಹಾಗೂ ಪ್ರದರ್ಶನವೇ ಈ ಸಾಧನೆ ಕಾರಣವಾಯಿತು. ಇತ್ತ ಕೊಹ್ಲಿ ಕಳಪೆ ಫಾರ್ಮ್ ಹಾಗೂ ನಾಯಕತ್ವ ತಂಡಕ್ಕೆ ಮುಳುವಾಯಿತು.

ಐಪಿಎಲ್ ಪ್ರದರ್ಶನವನ್ನು ಟೀಂ ಇಂಡಿಯಾಗೆ ಹೋಲಿಕೆ ಮಾಡುವುದು ಸರಿಯಲ್ಲ. ಇಷ್ಟೇ ಅಲ್ಲ ಏಕದಿನದಲ್ಲಿ ವಿಕಾಟ್ ಕೊಹ್ಲಿಯೇ ಕಿಂಗ್. ಕೊಹ್ಲಿ ಹಾಗೂ ಧೋನಿ ಕಾಂಬಿನೇಷ್ ವಿಶ್ವಕಪ್ ಗೆಲುವಿಗೆ ಮುಖ್ಯ. ಹೀಗಾಗಿಯೇ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ಫೇವರಿಟ್ ಏನಿಸಿಕೊಂಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.