ಮುಂಬೈ(ಮೇ.20): ವಿಶ್ವಕಪ್ ಟೂರ್ನಿಗಾಗಿ ತಂಡಗಳ ಕಠಿಣ ಅಭ್ಯಾಸ ಜೋರಾಗಿದೆ. ಸತತ ಐಪಿಎಲ್ ಪಂದ್ಯದಿಂದ  ಬಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಬಿಸಿಸಿಐ ಸೂಚನೆ ನೀಡಿದೆ. ಅಭ್ಯಾಸ ಬದಲು ಚಿಕ್ಕ ಪ್ರವಾಸ ಕೈಗೊಳ್ಳಿ ಎಂದು ಬಿಸಿಸಿಐ ಸೂಚನೆ ನೀಡಿದೆ. ಆದರೆ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಫುಲ್ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 2019 ವಿಶ್ವಕಪ್ ಪ್ರಶಸ್ತಿ ಯಾರಿಗೆ? - ರಿಕಿ ಪಾಂಟಿಂಗ್ ಭವಿಷ್ಯ!

ವಿಶ್ವಕಪ್ ಟೂರ್ನಿ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ ಬ್ಯುಸಿಯಾಗಿರೋದು ಜಿಮ್  ಅಭ್ಯಾಸದಲ್ಲಿ. ಪ್ರತಿ ದಿನ ಕನಿಷ್ಠ 3 ರಿಂದ 4 ಗಂಟೆ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಹಾರ್ದಿಕ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಶ್ವಕಪ್ ಟೂರ್ನಿ ಹತ್ತಿರವಿರುವಾಗ ವಿಶ್ರಾಂತಿಯ ಮಾತಿಲ್ಲ ಎಂದು ಹೇಳಿದ್ದಾರೆ.

 

 

ಇದನ್ನೂ ಓದಿ: ವಿಶ್ವಕಪ್ ತಯಾರಿ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಶಾಕ್-ನಿವೃತ್ತಿಗೆ ಮುಂದಾದ ಕೋಚ್!

ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಇದೇ ಪ್ರದರ್ಶನ ವಿಶ್ವಕಪ್ ಟೂರ್ನಿಯಲ್ಲೂ ನೀಡೋ ವಿಶ್ವಾಸದಲ್ಲಿದ್ದಾರೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಬಗೊಳ್ಳಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.