ಲಂಡನ್(ಮೇ.24): ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನ ಬಾಕಿ ಇರುವಾಗಲೇ ಎಲ್ಲಾ ತಂಡದ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ ಫೋಟೋಗೋ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋ ಪೋಸ್‌ಗೆ ಅಭಿಮಾನಿಗಳು ಜೋಕ್ಸ್ ಮಾಡಿದ್ದಾರೆ. ನಾಯಕರ ಕುಳಿತಿರುವ ರೀತಿಗೆ ಫ್ಯಾನ್ಸ್ ಫನ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಕುಳಿತ  ಶೈಲಿ, ಗೆಳೆಯರ ಜೊತೆ ಕೆಫೆಯಲ್ಲಿ ಕುಳಿತ ಹಾಗಿದೆ. ಆದರೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಪೋಷಕರ ಮುಂದೆ ಕುಳಿತ ಹಾಗಿದೆ ಎಂದು ಜೋಕ್ಸ್ ಮಾಡಿದ್ದಾರೆ.