ಮುಂಬೈ(ಮೇ.16): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ತಯಾರಿ ಆರಂಭಗೊಂಡಿದೆ. ಇದೇ 30 ರಿಂದ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕೇದಾರ್ ಜಾಧವ್ ಇನ್ನೂ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣ ಅವರ ಬದಲಿಗೆ ತಂಡದಲ್ಲಿ ಅಂಬಟಿ ರಾಯುಡು ಅಥವಾ ಅಕ್ಷರ್ ಪಟೇಲ್‌ಗೆ ಸ್ಥಾನ ಲಭಿಸುವ ಸಾಧ್ಯತೆಗಳು ದಟ್ಟವಾಗಿವೆ.  

ಇದನ್ನೂ ಓದಿ: ಪಂತ್ ಬದಲು ದಿನೇಶ್ ಕಾರ್ತಿಕ್- ವಿಶ್ವಕಪ್ ಆಯ್ಕೆ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

ಜಾಧವ್, ಎಡ ಭಾಗದ ಭುಜದ ನೋವಿಗೆ ತುತ್ತಾಗಿದ್ದು, ಇನ್ನು ಚೇತರಿಸಿಕೊಂಡಿಲ್ಲ. ಅವರ ಚೇತರಿಕೆ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಕೊನೆ ಕ್ಷಣದ ವರೆಗೂ ಕಾದು ನೋಡಲಾಗುವುದು. ಮೇ 22ರಂದು ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಅಷ್ಟರೊಳಗೆ ಜಾಧವ್ ಚೇತರಿಸಿಕೊಳ್ಳದಿದ್ದರೆ ರಾಯುಡು ಅಥವಾ ಅಕ್ಷರ್‌ಗೆ ಸ್ಥಾನ ನೀಡುವ
ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.