Neeraj Chopra: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ
88.13 ಮೀಟರ್ ದೂರ ಎಸೆದು ಇತಿಹಾಸ ನಿರ್ಮಿಸಿದ ನೀರಜ್ 
ಅಂಜು ಬಾಬಿ ಜಾರ್ಜ್‌ ಬಳಿಕ ಪದಕ ಗೆದ್ದ ಎರಡನೇ ಅಥ್ಲೀಟ್‌

World Athletics Championships Javelin Thrower Neeraj Chopra Create history win Silver Medal kvn

ಯುಜೀನ್‌(ಜು.24): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಸುತ್ತಿನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಬಳಿಕ ಪದಕ ಜಯಿಸಿದ ಎರಡನೇ ಭಾರತೀಯ ಅಥ್ಲೀಟ್ ಎನ್ನುವ ಹಿರಿಮೆಗೆ ನೀರಜ್ ಪಾತ್ರರಾಗಿದ್ದಾರೆ.

ಇಲ್ಲಿನ ಯುಜೀನ್‌ನಲ್ಲಿ ನಡೆದ ಜಾವೆಲಿನ್ ಥ್ರೋ ಫೈನಲ್‌ನ ಮೊದಲ ಪ್ರಯತ್ನದಲ್ಲಿ ಪೌಲ್‌ ಮಾಡಿದರು. ಇನ್ನು ನೀರಜ್ ಚೋಪ್ರಾ ತಮ್ಮ ಪಾಲಿನ ಎರಡನೇ ಪ್ರಯತ್ನದಲ್ಲಿ 82.39 ಮೀಟರ್ ದೂರ ಜಾವೆಲಿನ್ ಎಸೆದರು. ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ 86.37 ಮೀಟರ್ ದೂರ ಜಾವೆಲಿನ್ ಎಸೆದರು. ಈ ಮೂಲಕ ಮೂರನೇ ಸುತ್ತಿನ ಅಂತ್ಯದ ವೇಳೆಗೆ ನೀರಜ್ ಚೋಪ್ರಾ 4ನೇ ಸ್ಥಾನ ಪಡೆದರು. ಆದರೆ ನಾಲ್ಕನೇ ಸುತ್ತಿನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರು. 

ಇನ್ನು ಕೆನಡಾದ ಆಂಡರ್‌ಸನ್‌ ಪೀಟರ್ಸ್‌ ಮೊದಲ ಪ್ರಯತ್ನದಲ್ಲಿ 90.21 ಮೀಟರ್ ದೂರ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಆಂಡರ್‌ಸನ್‌ ಪೀಟರ್ಸ್‌ 90.46 ಮೀಟರ್ ಜಾವೆಲಿನ್ ಎಸೆಯುವ ಮೂಲಕ ತಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿರು. ಕೊನೆಯ ಯತ್ನದಲ್ಲಿ ಆಂಡರ್‌ಸನ್ ಪೀಟರ್ಸ್‌ 90.54 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

19 ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ: ಹೌದು, 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ ಅಂಜು ಬಾಬಿ ಜಾರ್ಜ್‌ ಲಾಂಗ್‌ ಜಂಪ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ ಭಾರತದ ಯಾವೊಬ್ಬ ಅಥ್ಲೀಟ್‌ ಕೂಡಾ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಪದಕ ಗೆಲ್ಲಲು ಯಶಸ್ವಿಯಾಗಿರಲಿಲ್ಲ. ಆದರೀಗ ಆ ಪದಕ ಬರವನ್ನು ನೀಗಿಸುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದಾರೆ.

World Championships ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ನೀರಜ್ ಚೋಪ್ರಾ, ರೋಹಿತ್ ಯಾದವ್ ಲಗ್ಗೆ

10ನೇ ಸ್ಥಾನಕ್ಕೆ ತೃಪ್ತಿಪಟ್ಟ ರೋಹಿತ್ ಯಾದವ್‌: ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಪಟು ರೋಹಿತ್ ಯಾದವ್, 'ಬಿ' ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ 80.42 ಮೀಟರ್ ದೂರ ಎಸೆದು ಫೈನಲ್ ಪ್ರವೇಶಿದ್ದರು. ಆದರೆ ಫೈನಲ್‌ನಲ್ಲಿ ರೋಹಿತ್ ಯಾದವ್, ಮೊದಲ ಮೂರು ಪ್ರಯತ್ನದಲ್ಲಿ ಕ್ರಮವಾಗಿ 78.72 ಮೀ, 77.96ಮೀ ಹಾಗೂ 78.72 ಮೀಟರ್ ದೂರ ಎಸೆದು 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು

ಮಹಿಳೆಯರ ಜಾವೆಲಿನ್‌: ಅನ್ನು ರಾಣಿಗೆ 7ನೇ ಸ್ಥಾನ

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ ಜಾವೆಲಿನ್‌ ಎಸೆತದಲ್ಲಿ ಫೈನಲ್‌ ಪ್ರವೇಶಿಸಿದ್ದ ಅನ್ನು ರಾಣಿ ಪದಕ ಸುತ್ತಿನಲ್ಲಿ 7ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ನಲ್ಲಿ 2ನೇ ಬಾರಿ ಫೈನಲ್‌ನಲ್ಲಿ ಸ್ಪರ್ಧಿಸಿದ ಉತ್ತರ ಪ್ರದೇಶದ ರಾಣಿ ಶುಕ್ರವಾರ ತಮ್ಮ 2ನೇ ಪ್ರಯತ್ನದಲ್ಲಿ 61.12 ಮೀ. ದೂರ ಎಸೆದರು. ಉಳಿದ ಐದೂ ಪ್ರಯತ್ನಗಳಲ್ಲಿ ಅವರು 60ರ ಗಡಿ ದಾಟಲು ವಿಫಲರಾದರು. ಮೇ ತಿಂಗಳಲ್ಲಿ ಜಮ್ಶೇಡ್‌ಪುರದಲ್ಲಿ ನಡೆದ ಇಂಡಿಯನ್‌ ಓಪನ್‌ನಲ್ಲಿ 63.82 ಮೀ. ದೂರ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದ ರಾಣಿ, ಅದೇ ಪ್ರದರ್ಶನ ಫೈನಲ್‌ನಲ್ಲಿ ತೋರಿದ್ದರೆ ಅವರಿಗೆ ಕನಿಷ್ಠ ಕಂಚಿನ ಪದಕ ದೊರೆಯುತ್ತಿತ್ತು. ಆಸ್ಪ್ರೇಲಿಯಾದ ಕೆಲ್ಸಿ ಲೀ ಬಾರ್ಬರ್‌ 66.91 ಮೀ. ದೂರ ಎಸೆದು ಚಿನ್ನ ಗೆದ್ದರೆ, ಅಮೆರಿಕದ ಕಾರಾ ವಿಂಗರ್‌(64.05 ಮೀ.) ಬೆಳ್ಳಿ, ಜಪಾನಿನ ಹರುಕಾ ಕಿಟಗುಚಿ(63.27 ಮೀ.) ಕಂಚು ತಮ್ಮದಾಗಿಸಿಕೊಂಡರು.
 

Latest Videos
Follow Us:
Download App:
  • android
  • ios