ನವದೆಹಲಿ(ಆ.14): ಮಹಿಳಾ ಟಿ-20 ಕ್ರಿಕೆಟ್‌ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್‌ ಗೇಮ್ಸ್‌ನ ಅಂಗ​ವಾ​ಗ​ಲಿ​ದೆ​ಯೆಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌) ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. 

ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ: ದಶಕಗಳ ಕನಸು ನನಸು..?

ಗೇಮ್ಸ್‌ನಲ್ಲಿ ಮಹಿಳಾ ಟಿ-20 ಕ್ರಿಕೆಟ್‌ ಆಯೋಜನೆಗೆ ಐಸಿಸಿ, ಇಂಗ್ಲೆಂಡ್‌ ಕ್ರಿಕೆಟ್‌ ಸಂಸ್ಥೆ (ಇಸಿಬಿ) ಜಂಟಿ ಬಿಡ್‌ ಸಲ್ಲಸಿದ್ದವು. 1998ರ ಬಳಿಕ ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಸ್ಥಾನ ಸಿಕ್ಕಿದೆ. 8 ತಂಡಗಳು ಸ್ಪರ್ಧಿಸಲಿವೆ ಎಂದು ಸಿಜಿಎಫ್‌ ತಿಳಿಸಿದೆ. 8 ದಿನಗಳ ಕಾಲ ಕ್ರಿಕೆಟ್‌ ಸ್ಪರ್ಧೆ ನಡೆಯಲಿದ್ದು, ಎಲ್ಲಾ ಪಂದ್ಯಗಳು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿವೆ. ಬಿಸಿಸಿಐ ಸಹ ಈಗ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ ಒಂದೆನಿಸಿರುವ ಕಾರಣ, ಭಾರತ ತಂಡವನ್ನೂ ಕ್ರೀಡಾಕೂಟಕ್ಕೆ ಕಳುಹಿಸುವ ನಿರೀಕ್ಷೆ ಇದೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪುರುಷರ ಏಕದಿನ ಕ್ರಿಕೆಟ್‌ ಸೇರ್ಪಡೆಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ ತಂಡ ಚಿನ್ನದ ಪದಕ ಜಯಿಸಿತ್ತು.

ಶೂಟಿಂಗ್‌ಗೆ ಜಾಗವಿಲ್ಲ!

ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕುವ ಭಾರತದ ಬೆದರಿಕೆಗೆ ಸಿಜಿಎಫ್‌ ಸೊಪ್ಪು ಹಾಕಿಲ್ಲ. ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ಮತ್ತ್ಯಾವುದೇ ಕ್ರೀಡೆ ಸೇರಿಸಲು ಜಾಗವಿಲ್ಲ ಎನ್ನುವ ಮೂಲಕ ಸಿಜಿಎಫ್‌, ಶೂಟಿಂಗ್‌ ಮರು ಸೇರ್ಪಡೆ ವಿಚಾರಕ್ಕೆ ಪೂರ್ಣವಿರಾಮವಿಟ್ಟಿದೆ.