Asianet Suvarna News Asianet Suvarna News

ಭಾರತ ವನಿತೆಯರಿಗೆ 134 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ

ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಲಾ ಟಿ20 ವಿಶ್ವಕಪ್ ಲೀಗ್ ಪಂದ್ಯ ಕುತೂಹಲ ಘಟ್ಟದತ್ತ ಸಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ರನ್ ಭಾರಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

Women T20 World Cup India need runs 136 to win against Pakistan
Author
Bengaluru, First Published Nov 11, 2018, 10:05 PM IST

ಗಯಾನ(ನ.11): ಭಾರತ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ನಿಗದಿತ 20 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 133 ರನ್ ಪೇರಿಸಿದೆ. ಈ ಮೂಲಕ ಭಾರತದ ಗೆಲುವಿಗೆ 137 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. 30 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಬಿಸ್ಮಾ ಮಾರೂಫ್ ಹಾಗೂ ನಿದಾ ದಾರ್ ಜೊತೆಯಾಟದಿಂದ ಪಾಕ್ ಚೇತರಿಸಿಕೊಂಡಿತು.

ಬಿಸ್ಮಾ 54 ರನ್ ಸಿಡಿಸಿ ಔಟಾದರು. ನಿದಾ ದಾರ್ 52 ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸಿತು. ಭಾರತದ ಪರ ಪೂನಮ್ ಯಾದವ್ ಹಾಗೂ ದಯಾಲನ್ ಹೇಮಲತಾ ತಲಾ 2 ವಿಕೆಟ್ ಕಬಳಿಸಿದರು.

Follow Us:
Download App:
  • android
  • ios