ಜೈಪುರ(ಮೇ.06): ಮಹಿಳಾ ಐಪಿಎಲ್ ಟೂರ್ನಿಯ ಮೊದಲ ಪ್ರದರ್ಶನ ಪಂದ್ಯದಲ್ಲಿ ಸೂಪರ್‌ನೋವಾಸ್ ಹಾಗೂ ಟ್ರೈಲ್‌ಬ್ಲೇಜರ್ಸ್ ಹೋರಾಟ ನಡೆಸುತ್ತಿದೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಬ್ಯಾಟಿಂಗ್ ನೆರವಿನಿಂದ ಟ್ರೈಲ್‌ಬ್ಲೇಜರ್ಸ್ 5 ವಿಕೆಟ್ ನಷ್ಟಕ್ಕೆ 140 ರನ್ ಸಿಡಿಸಿದೆ. ಇದೀಗ ಗೆಲುವಿಗಾಗಿ ಸೂಪರ್‌ನೊವಾಸ್ ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟ್ರೈಲ್‌ಬ್ಲೇಜರ್ಸ್ ಆರಂಭದಲ್ಲೇ ಸುಝಿ ಬೇಟ್ಸ್ ವಿಕೆಟ್ ಕಳೆದುಕೊಂಡಿತು. ಬೇಟ್ಸ್ ಕೇವಲ 1 ರನ್ ಸಿಡಿಸಿ ಔಟಾದರು. ಆದರೆ ಮಂಧಾನ ಹಾಗೂ ಹರ್ಲಿನ್ ಜೊತೆಯಾಟದಿಂದ ಬ್ಲೇಜರ್ಸ್ ಚೇತರಿಸಿಕೊಂಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಸನ ನೀಡಿದ ಮಂಧಾನ ಆಕರ್ಷಕ ಅರ್ಧಶತಕ ಸಿಡಿಸಿದರು.

ಹರ್ಲಿನ್ 36 ರನ್ ಸಿಡಿಸಿ ಔಟಾದರು. ಆದರೆ ಮಂಧಾನ ಹೋರಾಟ ಮುಂದುವರಿಸಿದರು. 67 ಎಸೆತದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 90 ರನ್ ಸಿಡಿಸಿ ಔಡಾದರು. ಈ ಮೂಲಕ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಈ ಮೂಲಕ  ಟ್ರೈಲ್‌ಬ್ಲೇಜರ್ಸ್ 5 ವಿಕೆಟ್ ನಷ್ಟಕ್ಕೆ140 ರನ್ ಸಿಡಿಸಿತು.