ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ 4ನೇ ಸುತ್ತು ಪ್ರವೇಶಿಸಿದ ಜೋಕೋವಿಚ್ಮಹಿಳಾ ಸಿಂಗಲ್ಸ್‌ನಲ್ಲಿ ಮುಂದುವರೆದ ಇಗಾ ಸ್ವಿಯಾಟೆಕ್ ಗೆಲುವಿನ ನಾಗಾಲೋಟಮಿಶ್ರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಸಾನಿಯಾ ಮಿರ್ಜಾ

ಲಂಡನ್‌(ಜು.02): ಅಗ್ರ ಶ್ರೇಯಾಂಕಿತ ಟೆನಿಸಿಗ ನೋವಾಕ್ ಜೋಕೋವಿಚ್ (Novak Djokovic) ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಸರ್ಬಿಯಾದವರೇ ಆದ ಮಿಯೊಮಿರ್ ಕೆಮನೊವಿಚ್ ವಿರುದ್ದ 6-0, 6-3, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಇನ್ನು ಇದೇ ವೇಳೆ ಫ್ರೆಂಚ್ ಓಪನ್ ಚಾಂಪಿಯನ್‌ಗಳಾದ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal) ಹಾಗೂ ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.1 ಆಟಗಾರ್ತಿ ಪೊಲೆಂಡ್‌ನ ಇಗಾ ಸ್ವಿಯಾಟೆಕ್‌ (Iga Swiatek) ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ 22 ಗ್ರ್ಯಾನ್ ಸ್ಲಾಂ ಒಡೆಯ ರಾಫೆಲ್ ನಡಾಲ್, ಲಿಥುವೇನಿಯಾದ ಬೆಕಾಂಕಿನ್ ವಿರುದ್ದ 6-4, 6-4, 4-6, 6-3 ಸೆನ್‌ಗಳಿಂದ ಗೆಲುವು ಸಾಧಿಸಿದರೇ, ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು, ನೆದರ್‌ಲೆಂಡ್ಸ್‌ನ ಲೆಸ್ಲೆ ಕೆರ್ಕೊವೆ ವಿರುದದ 6-4, 3-6, 6-4 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಇಗಾ ಸ್ವಿಯಾಟೆಕ್‌ಗಿದು ಸತತ 37ನೇ ಗೆಲುವಾಗಿದೆ. ಇನ್ನು ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಾನಿಯಾ ಮಿರ್ಜಾ ಹಾಗೂ ಕ್ರೊವೇಷಿಯಾದ ಪಾವಿಚ್ ಜೋಡಿಯು ಎರಡನೇ ಸುತ್ತು ಪ್ರವೇಶಿಸಿದೆ.

ವಿಂಬಲ್ಡನ್‌: ಪ್ರೇಕ್ಷಕನತ್ತ ಉಗಿದ ಕಿರಿಯೋಸ್‌ಗೆ 8 ಲಕ್ಷ ರುಪಾಯಿ ದಂಡ

ಲಂಡನ್‌: ವಿವಾದಿತ ಟೆನಿಸಿಗ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ಮತ್ತೊಮ್ಮೆ ಅನುಚಿತವಾಗಿ ವರ್ತಿಸಿದ್ದು, ಭಾರೀ ದಂಡಕ್ಕೆ ಗುರಿಯಾಗಿದ್ದಾರೆ. ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ (Wimbledon 2022) ಟೂರ್ನಿಯ ಮೊದಲ ಸುತ್ತಿನ ಪಂದ್ಯದ ವೇಳೆ ತಮ್ಮನ್ನು ಕಿಚ್ಚಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಗ್ಯಾಲರಿಯಲ್ಲಿ ಕೂತಿದ್ದ ಪ್ರೇಕ್ಷಕನೊಬ್ಬನತ್ತ ಉಗಿದ ಕಿರಿಯೋಸ್‌ಗೆ ಆಯೋಜಕರು 10,000 ಅಮೆರಿಕನ್‌ ಡಾಲರ್‌(ಅಂದಾಜು 7.89 ಲಕ್ಷ ರು.) ದಂಡ ವಿಧಿಸಿದ್ದಾರೆ. ಇದು ಟೂರ್ನಿಯಲ್ಲಿ ಈ ವರೆಗೂ ವಿಧಿಸಿದ ಗರಿಷ್ಠ ಮೊತ್ತದ ದಂಡ ಎನಿಸಿದೆ.

Wimbledon 2022 ಸತತ 36 ಪಂದ್ಯ ಗೆದ್ದು ದಾಖಲೆ ಬರೆದ ಇಗಾ ಸ್ವಿಯಾಟೆಕ್‌

ಕ್ವಾರ್ಟರ್‌ನಲ್ಲಿ ಸೋತ ಸಿಂಧು, ಪ್ರಣಯ್‌

ಕೌಲಾಲಂಪುರ: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. 2 ಬಾರಿ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಥಾಮಸ್‌ ಕಪ್‌ ಗೆಲುವಿನ ಹೀರೋ ಎಚ್‌.ಎಸ್‌.ಪ್ರಣಯ್‌ ಸೋತು ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ ವಿರುದ್ಧ 21-13, 15-21, 13-21 ಗೇಮ್‌ಗಳಲ್ಲಿ ಸೋತರು. ತೈ ತ್ಸು ವಿರುದ್ಧ ಸಿಂಧುಗಿದು ಸತತ 6ನೇ ಸೋಲು. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣಯ್‌, ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ 21-18, 21-16 ಗೇಮ್‌ಗಳಲ್ಲಿ ಪರಾಭವಗೊಂಡರು.