ವಿಂಬಲ್ಡನ್: ಎರಡನೇ ಸುತ್ತಿಗೆ ನಡಾಲ್, ಮುಗುರುಜಾ

First Published 4, Jul 2018, 10:33 AM IST
Wimbledon 2018 Nadal Muguruza Enters 2nd Round
Highlights
  • ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯ
  • ಮಹಿಳೆಯರ ಸಿಂಗಲ್ಸ್‌ನಲ್ಲಿ ಮುಗುರುಜಾ, ಕೆರ್ಬರ್‌ಗೆ ಜಯ

ಲಂಡನ್: ವಿಂಬಲ್ಡನ್ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವದ ನಂ.1 ಟೆನಿಸಿಗ ಸ್ಪೇನ್‌ನ ರಾಫೆಲ್ ನಡಾಲ್, ವರ್ಷದ ಮೂರನೇ ಗ್ರ್ಯಾಂಡ್ ಸ್ಲಾಂನಲ್ಲಿ ಶುಭಾರಂಭ ಮಾಡಿ ದ್ದಾರೆ. 

ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್, ಇಸ್ರೇಲ್‌ನ ಡುಡೆ ಸೆಲಾರನ್ನು 6-3, 6-3, 6-2 ಸೆಟ್‌ಗಳಲ್ಲಿ ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. 

ಪಂದ್ಯದುದ್ದಕ್ಕೂ ಪಾರಮ್ಯ ಮೆರೆದ ನಡಾಲ್, ಎದುರಾಳಿ ಡುಡೆ ಸೆಲಾ ಅಂಕ ಗಳಿಸಲು ಪರದಾಡಬೇಕಾಯಿತು. ಆಸ್ಟ್ರೇಲಿಯಾದ ನಿಕ್ ಕಿರ್ಗಿಸ್, ಡೆನಿಸ್ ಇಸ್ಟೋಮಿನ್ರನ್ನು 7-6, 7-6, 6-7, 6-3 ಸೆಟ್‌ಗಳಲ್ಲಿ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದರು. 

ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಇಬ್ಬರೂ ಪರಸ್ಪರ ತೀವ್ರ ಪೈಪೋಟಿ ನಡೆಸಿದರು. ಆರಂಭಿಕ 2 ಸೆಟ್ ಗಳಲ್ಲಿ ಜಯ ಸಾಧಿಸಿದ ಕಿರ್ಗಿಯೋಸ್, 3ನೇಯದರಲ್ಲಿ ಎಡವಿದರು. 

3ನೇ ಸೆಟ್‌ನಲ್ಲಿ ಜಯ ಸಾಧಿಸಿದ ಡೆನಿಸ್, ಕೊನೆಯದಲ್ಲಿ ಸೋತು ಪಂದ್ಯ ಬಿಟ್ಟುಕೊಟ್ಟರು. ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್, ಜೇಮ್ಸ್ ಡಕ್‌ವತ್ ರರ್ನ್ನು 7-5, 6-2, 6-0 ಸೆಟ್‌ಗಳಿಂದ ಪರಾಭವಗೊಳಿಸಿ, 2ನೇ ಸುತ್ತಿಗೆ ಪ್ರವೇಶಿಸಿದರು.

ಮುಗುರುಜಾ, ಕೆರ್ಬರ್‌ಗೆ ಜಯ: 
ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿ ಯನ್ ವಿಶ್ವದ ನಂ.1 ಗಾರ್ಬೈನ್ ಮುಗುರುಜಾ 2ನೇ ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿ ದ್ದಾರೆ. ಅವರು ಸೋಮವಾರ ನಡೆದ ಆರಂಭಿಕ ಪಂದ್ಯದಲ್ಲಿ, ನವೋಮಿ ಬ್ರಾಡಿ ವಿರುದ್ಧ 6-2, 7-5 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಮುಗುರುಜಾ 2ನೇ ಸುತ್ತಿನಲ್ಲಿ ಬೆಲ್ಜಿಯಂನ ಅಲಿಸನ್ ವ್ಯಾನ್ ಅಥವಾ ಸ್ಲೊವೇನಿಯಾದ ಪೂಲಾನ ಹರ್ಜೋಗ್ ರನ್ನು ಎದುರಿಸಲಿ ದ್ದಾರೆ. ಗ್ರೇಟ್ ಬ್ರಿಟನ್‌ನ ಜೊಹನ್ನಾ ಕೊಂಟಾ ಆರಂಭಿಕ ಸುತ್ತಿನಲ್ಲಿ ರಷ್ಯಾದ ನಟಾಲಿಯಾ ವಿಕ್ಲಿಂತಸೆವಾರನ್ನು 7-5, 7-6 ನೇರ ಸೆಟ್‌ಗಳಿಂದ ಮಣಿಸಿ, 2ನೆ ಸುತ್ತಿಗೆ ಲಗ್ಗೆ ಇಟ್ಟರು

loader