ಮುಂಬೈ(ಫೆ.20): ಸಂಭಾವನೆ ಇಲ್ಲದೆ ಆಡಲೂ ಸಿದ್ಧನಾದರೂ ಯಾವ ತಂಡವೂ ಆಸಕ್ತಿ ತೋರಲಿಲ್ಲ ಎಂದು ವಿದರ್ಭ ತಂಡದ ಹಿರಿಯ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ತೊರೆದ ಬಳಿಕ ವಾಸಿಮ್ ಜಾಫರ್ ಸೇವೆಯನ್ನ ಬಳಸಿಕೊಳ್ಳಲು ಯಾವ ರಣಜಿ ತಂಡವೂ ಮುಂದೆ ಬರಲಿಲ್ಲ. ಇದು ಸಾಕಷ್ಟು ನೋವು ತಂದಿತ್ತು ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: ತಂಡಕ್ಕೆ ಭಾರವಾದ್ರೆ ಬ್ಯಾಗ್ ಪ್ಯಾಕ್ ಮಾಡುತ್ತೇನೆ: ವಾಸಿಮ್ ಜಾಫರ್!

ವಿಜಯ್ ಹಜಾರೆ ಟೂರ್ನಿಯಲ್ಲಿ ಗರಿಷ್ಠ ರನ್ ಸರದಾರನಾಗಿ ಗುರುತಿಸಿಕೊಂಡ ನನ್ನನ್ನ ಮುಂಬೈ ಆಯ್ಕೆ ಸಮಿತಿ ಆಯ್ಕೆ ಮಾಡೋ ಪ್ರಯತ್ನಕ್ಕೆ ಮುಂದಾಗಲಿಲ್ಲ. ಇದೇ ವೇಳೆ ಗಾಯಗೊಂಡು ಅನಿವಾರ್ಯವಾಗಿ ತಂಡದಿಂದ ಹೊರಬಿದ್ದೆ. ಬಳಿಕ ಮುಂಬೈ ಯುವ ಕ್ರಿಕೆಟಿಗರ ಅವಕಾಶ ಮಾಡಿಕೊಡೋ ನಿಟ್ಟಿನಲ್ಲಿ ಮುಂಬೈ ತಂಡಕ್ಕೆ ರಾಜಿನಾಮೆ ನೀಡಿದೆ. ಬಳಿಕ ನಾನು ಯಾವುದೇ ಸಂಭಾವನೆ ಇಲ್ಲದೆ ಆಡಲು ಸಿದ್ಧನಿದ್ದೆ. ಆದರೆ ಯಾವ ತಂಡವೂ ಸೇರಿಸಿಕೊಳ್ಳಲು ಆಸಕ್ತಿ ತೋರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಚಂದ್ರಕಾಂತ್ ಪಂಡಿತ್ ವಿದರ್ಭ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ನನ್ನನ್ನ ವಿದರ್ಭ ತಂಡಕ್ಕೆ ಸೇರಿಸಿಕೊಂಡರು ಎಂದು 41 ವರ್ಷದ ವಾಸಿಮ್ ಜಾಫರ್ ತಮ್ಮ ರಣಜಿ ಜರ್ನಿಯನ್ನ ಬಿಚ್ಚಿಟ್ಟಿದ್ದಾರೆ. ಜಾಫರ್ ವಿದರ್ಭ ತಂಡ ಸೇರಿದ ಬಳಿಕ ಸತತ 2 ಬಾರಿ ವಿದರ್ಭ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಕ್ರಿಸ್ ಗೇಲ್!

ಇಂಡಿಯನ್ ಆಯಿಲ್ ಸಂಸ್ಥೆಯ ಉದ್ಯೋಗಿಯಾಗಿರುವ ವಾಸಿಮ್ ಜಾಫರ್‌ಗೆ 9 ರಿಂದ ಸಂಜೆ 5 ಗಂಟೆ ಕೆಲಸ ಮಾಡೋ ಯಾವುದೇ ಯೋಚನೆ ಇಲ್ಲ. ಕ್ರಿಕೆಟ್ ಬಿಟ್ಟು ಬೇರೇನು ನನಗೆ ಹಿಡಿಸದು. ಹೀಗಾಗಿ ಸದ್ಯಕ್ಕೆ ವಿದಾಯ ನೀಡಲ್ಲ ಎಂದು ವಾಸಿಮ್ ಜಾಫರ್ ಸ್ಪಷ್ಟಪಡಿಸಿದ್ದಾರೆ.