Asianet Suvarna News Asianet Suvarna News

ಸೆಹ್ವಾಗ್ 'ಸಚಿನ್' ಸಿನಿಮಾ ನೋಡಲಿಲ್ಲ: ಕೊಟ್ಟ ಕಾರಣ ಮಾತ್ರ ದೊಡ್ಡದು !!

ಈ ಬಗ್ಗೆ ಟ್ವಿಟರ್'ನಲ್ಲಿ ಬರೆದುಕೊಂಡಿರುವ ವೀರು ' ಕ್ರಿಕೆಟ್ ದೇವರ ಸಿನಿಮಾವನ್ನು ನೋಡಬೇಕಿತ್ತು.

Why Virender Sehwag missed Sachin Tendulkars biopic Sachin A Billion Dreams
  • Facebook
  • Twitter
  • Whatsapp

ಭಾರತೀಯ ಕ್ರಿಕೆಟ್ ರಂಗದ ದಂತಕತೆ ಸಚಿನ್ ತೆಂಡೂಲ್ಕರ್ ಅವರ  ಆತ್ಮಕತೆ ಆಧರಿಸಿದ ಸಿನಿಮಾ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಸಿನಿಮಾ'ವನ್ನು ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್'ಮೆನ್ ಹಾಗೂ ಹಲವು ಪಂದ್ಯಗಳಲ್ಲಿ ಸಚಿನ್  ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ವೀರೇಂದ್ರ ಸೆಹ್ವಾಗ್  ಮಿಸ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್'ನಲ್ಲಿ ಬರೆದುಕೊಂಡಿರುವ ವೀರು ' ಕ್ರಿಕೆಟ್ ದೇವರ ಸಿನಿಮಾವನ್ನು ನೋಡಬೇಕಿತ್ತು. ಆದರೆ ನನ್ನ ಹೆಂಡತಿಯಿಂದ ಇದು ಸಾಧ್ಯವಾಗಲಿಲ್ಲ. ದೇವರನ್ನು ಒಲಿಸಿಕೊಳ್ಳಬಹುದು. ಆದರೆ ಹೆಂಡತಿಯನ್ನು ಒಲಿಸಿಕೊಳ್ಳುವುದು ಕಷ್ಟ. ಸಿನಿಮಾ ನೋಡುವ ಸಂದರ್ಭದಲ್ಲಿಯೇ ರಜೆಯಿದ್ದ ಕಾರಣ. ಪತ್ನಿಯ ಜೊತೆ ಬೇರೆ ಕಡೆ ಹೋಗಬೇಕಾಯಿತು.' ಈ ಕಾರಣದಿಂದ ಸಿನಿಮಾ ನೋಡುವುದು ಮಿಸ್ ಆಯಿತು' ಎಂದಿದ್ದಾರೆ.

ಶೀಘ್ರದಲ್ಲಿಯೇ ಒಂದಿಷ್ಟು ಹಣ ಖರ್ಚು ಮಾಡಿಕೊಂಡು ಸಚಿನ್ ಅವರ ನೋಡಿಯೇ ನೋಡುತ್ತೇನೆ' ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios