ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ-ಸಚಿನ್ ತೆಂಡೂಲ್ಕರ್‌ಗೆ ಯಾಕಿಲ್ಲ?

ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಮಕಾಲೀನ ಕ್ರಿಕೆಟಿಗರು. ದ್ರಾವಿಡ್‌ಗಿಂತ ಮೊದಲೆ ಭಾರತ ತಂಡ ಪ್ರತಿನಿಧಿಸಿದ ಕ್ರಿಕೆಟಿಗ ಸಚಿನ್. ಆದರೆ ಐಸಿಸಿ ಹಾಲ್ ಆಫ್ ಘೇಮ್ ಗೌರವ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ಮೊದಲು ರಾಹುಲ್ ದ್ರಾವಿಡ್‌ಗೆ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾಗಿದ್ದರೂ, ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
 

Why Sachin Tendulkar hasnt been inducted into ICC Hall of Fame yet Heres the reason

ಬೆಂಗಳೂರು(ಜು.05): ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಅಂಡರ್ 19 ಹಾಗೂ ಎ ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ  ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ದದ 5ನೇ ಏಕದಿನ ಪಂದ್ಯಕ್ಕೂ ಮೊದಲು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗೌರವ ಪ್ರಧಾನ ಮಾಡಿದರು.

 

 

ಈ ಮೂಲಕ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ ಹಾಗೂ ಅನಿಲ್ ಕುಂಬ್ಳೆ ಬಳಿಕ ಈ ಗೌರವಕ್ಕೆ ಪಾತ್ರವಾಗುತ್ತಿರುವ 5ನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ. ರಾಹುಲ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರವಾಗುತ್ತಿದ್ದಂತೆ ಕ್ರಿಕೆಟ್ ದಿಗ್ಗಜರು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ದ್ರಾವಿಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕ ಕೂಡ ದ್ರಾವಿಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರೋದಕ್ಕೆ ಯಾರದ್ದೂ ತಕರಾರಿಲ್ಲ. ವಿಶ್ವ ಕ್ರಿಕೆಟ್‌ನ ಬಹುತೇಕ ಎಲ್ಲಾ ದಾಖಲೆಗಳನ್ನ ತನ್ನ ಹೆಸರಿಗೆ ಬರೆಯಿಸಿಕೊಂಡಿರುವ ಸಚಿನ್ ತೆಂಡೂಲ್ಕರ್‌ಗೆ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ ಅನ್ನೋ ಪ್ರಶ್ನೆಗಳು ಎದ್ದಿದೆ.

ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗ ಅನ್ನೋದರಲ್ಲಿ ಎರಡು ಮಾತಿಲ್ಲ. ಭಾರತದ ಪ್ರತಿ ಜನರೇಶನ್ ಶ್ರೇಷ್ಠ ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಗೌರವ ಸಿಕ್ಕಿದೆ. ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಸಮಕಾಲೀನ ಕ್ರಿಕೆಟಿಗರು ಇಷ್ಟಾದರೂ ಸಚಿನ್ ಬಿಟ್ಟು ದ್ರಾವಿಡ್‌ಗೆ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸರಳ.

ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆಯಾಗಲು ಪ್ರಮುಖ 2 ನಿಯಮಗಳಿವೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಾವುದೇ ಎರಡು ಮಾದರಿಯಲ್ಲಿ 8000 ರನ್ ಹಾಗೂ ಕನಿಷ್ಠ 20 ಶತಕ ಸಿಡಿಸಿರಬೇಕು. ಆದರೆ ಸಚಿನ್ ಏಕದಿನದಲ್ಲಿ18,426 ರನ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಸಿಡಿಸಿದ್ದಾರೆ. ಇನ್ನು ಎರಡು ಮಾದರಿಯಿಂದ 100 ಶತಕ ಕೂಡ ಬಾರಿಸಿದ್ದಾರೆ. ಹೀಗಾಗಿ ಮೊದಲ ನಿಯಮದಲ್ಲಿ ಸಚಿನ್ ಪಾಸ್. 

ಎರಡನೇ ನಿಮಯ ಸಚಿನ್‌ಗೆ ಹಿನ್ನಡೆಯಾಗಿದೆ.  ನಿಯಮದ ಪ್ರಕಾರ, ಶ್ರೇಷ್ಠ ಕ್ರಿಕೆಟಿಗರನ್ನ ಹಾಲ್ ಆಫ್ ಗೌರವಕ್ಕೆ  ಆಯ್ಕೆ ಮಾಡಲು, ಅವರು ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ 5 ವರ್ಷಗಳು ಕಳೆದಿರಬೇಕು. ಆದರೆ ಸಚಿನ್ ತೆಂಡೂಲ್ಕರ್ 2013ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗೋ ಮೂಲಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಸಚಿನ್ ತೆಂಡೂಲ್ಕರ್ ಮುಂದಿನ ವರ್ಷದಿಂದ ಹಾಲ್ ಆಫ್ ಫೇಮ್ ಗೌರವಕ್ಕೆ ಅರ್ಹರಾಗಿದ್ದಾರೆ. ಹೀಗಾಗಿ ಮುಂದಿನ ವರ್ಷ ಖಂಡಿತವವಾಗಿಯೂ ಸಚಿನ್ ತೆಂಡೂಲ್ಕರ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಲಿದ್ದಾರೆ.

Latest Videos
Follow Us:
Download App:
  • android
  • ios