Asianet Suvarna News Asianet Suvarna News

ದಿಗ್ಗಜ ಧೋನಿಗಿಂತ ಬುಮ್ರಾಗೇಕೆ ಹೆಚ್ಚು ವೇತನ..?

‘ಎ+ ದರ್ಜೆಯಲ್ಲಿ ಸ್ಥಾನ ಪಡೆದ ’ಬುಮ್ರಾ ವಾರ್ಷಿಕ ₹7 ಕೋಟಿ ಸಂಭಾವನೆ ಪಡೆದರೆ, ‘ಎ’ ದರ್ಜೆಯಲ್ಲಿರುವ ಧೋನಿಗೆ ವರ್ಷಕ್ಕೆ ಸಿಗುವುದು ₹5 ಕೋಟಿ. ಬುಮ್ರಾ 2 ವರ್ಷದ ಹಿಂದಷ್ಟೇ ಏಕದಿನ ಹಾಗೂ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ತಂಡಕ್ಕೆ ಕಾಲಿಟ್ಟರು. ‘ಎ+’ ದರ್ಜೆಯಲ್ಲಿರುವ ಎಲ್ಲಾ 5 ಆಟಗಾರರಿಗಿಂತ ಧೋನಿ ಹೆಚ್ಚು ಅನುಭವಿ. ಆದರೂ ‘ಎ+’ನಲ್ಲಿ ಅವರಿಗೆ ಸ್ಥಾನವಿಲ್ಲ.

Why BCCI is paying Mahendra Singh Dhoni less than Jasprit Bumrah

ನವದೆಹಲಿ(ಮಾ.09):  ಬಿಸಿಸಿಐ 2017-18ರ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಗೊಳಿಸಿದಾಗ ಅಚ್ಚರಿಯೊಂದು ಕಾದಿತ್ತು. ದಿಗ್ಗಜ ಎಂ.ಎಸ್.ಧೋನಿಗಿಂತ ಯುವ ವೇಗದ ಬೌಲರ್ ಜಸ್‌'ಪ್ರೀತ್ ಬುಮ್ರಾಗೆ ಹೆಚ್ಚು ವೇತನ ದೊರೆತಿತ್ತು.

‘ಎ+ ದರ್ಜೆಯಲ್ಲಿ ಸ್ಥಾನ ಪಡೆದ ’ಬುಮ್ರಾ ವಾರ್ಷಿಕ ₹7 ಕೋಟಿ ಸಂಭಾವನೆ ಪಡೆದರೆ, ‘ಎ’ ದರ್ಜೆಯಲ್ಲಿರುವ ಧೋನಿಗೆ ವರ್ಷಕ್ಕೆ ಸಿಗುವುದು ₹5 ಕೋಟಿ. ಬುಮ್ರಾ 2 ವರ್ಷದ ಹಿಂದಷ್ಟೇ ಏಕದಿನ ಹಾಗೂ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ತಂಡಕ್ಕೆ ಕಾಲಿಟ್ಟರು. ‘ಎ+’ ದರ್ಜೆಯಲ್ಲಿರುವ ಎಲ್ಲಾ 5 ಆಟಗಾರರಿಗಿಂತ ಧೋನಿ ಹೆಚ್ಚು ಅನುಭವಿ. ಆದರೂ ‘ಎ+’ನಲ್ಲಿ ಅವರಿಗೆ ಸ್ಥಾನವಿಲ್ಲ.

‘ಎ+’ ಸೇರಲು ಅರ್ಹತೆ ಏನು?: ಅತ್ಯುನ್ನತ ದರ್ಜೆಯಲ್ಲಿ ಸ್ಥಾನ ಪಡೆಯಬೇಕಿರುವ ಆಟಗಾರರು ಎಲ್ಲಾ ಮೂರೂ ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸಬೇಕು. ಜತೆಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿರಬೇಕು. ಧೋನಿ ಈ ಎರಡು ಮಾನದಂಡಗಳನ್ನು ಪೂರ್ಣಗೊಳಿಸುವುದಿಲ್ಲ.

Follow Us:
Download App:
  • android
  • ios