ಮುಂದಿನ 2019ರ ಏಕದಿನ ವಿಶ್ವಕಪ್‌'ನಲ್ಲಿ ಯುವರಾಜ್ ಸಿಂಗ್, ಆಡುವ ವಿಶ್ವಾಸವಿದೆ ಎಂದು ಗಂಗೂಲಿ ಹೇಳಿದ್ದಾರೆ. ಅಂದಹಾಗೆ 300 ಏಕದಿನ ಪಂದ್ಯವಾಡುತ್ತಿರುವ ಭಾರತದ ಐದನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಯುವಿ ಪಾತ್ರವಾಗಿದ್ದಾರೆ.

ಲಂಡನ್(ಜೂ.15): 2000ನೇ ಇಸವಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಇಂದು ಏಕದಿನ ಕ್ರಿಕೆಟ್'ನ 300ನೇ ಪಂದ್ಯವನ್ನಾಡುತ್ತಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವಿ, ಆನಂತರ ಕ್ಯಾನ್ಸರ್ ಮಹಾಮಾರಿಯೊಂದಿಗೆ ಸೆಣಸಿ ಜನತೆಗೆ ಸ್ಪೂರ್ತಿ ಎನಿಸಿದ್ದಾರೆ.

ಇಂದು ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯವು

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿದ್ದು, ಈ ಪಂದ್ಯಯು ಯುವಿ ಪಾಲಿಗೆ 300ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.

ಈ ಐತಿಹಾಸಿಕ ಪಂದ್ಯವಾಡುತ್ತಿರುವ ಯುವರಾಜ್ ಸಿಂಗ್‌'ಗೆ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ದಿಗ್ಗಜ ಕ್ರಿಕೆಟಿಗರು ಅಭಿನಂದಿಸಿದ್ದಾರೆ.

ಮುಂದಿನ 2019ರ ಏಕದಿನ ವಿಶ್ವಕಪ್‌'ನಲ್ಲಿ ಯುವರಾಜ್ ಸಿಂಗ್, ಆಡುವ ವಿಶ್ವಾಸವಿದೆ ಎಂದು ಗಂಗೂಲಿ ಹೇಳಿದ್ದಾರೆ. ಅಂದಹಾಗೆ 300 ಏಕದಿನ ಪಂದ್ಯವಾಡುತ್ತಿರುವ ಭಾರತದ ಐದನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಯುವಿ ಪಾತ್ರವಾಗಿದ್ದಾರೆ.

ಯುವಿಗೆ ಕ್ರಿಕೆಟ್ ದಿಗ್ಗಜರು ಹರಿಸಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…