ಮತ್ತೊಮ್ಮೆ ಮ್ಯಾಚ್ ಫಿನಿಷರ್ ಆಗಿ ಮಿಂಚಿದ ಧೋನಿ ಬ್ಯಾಟಿಂಗ್'ಗೆ ಆರ್'ಸಿಬಿ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್'ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕೋಲ್ಕತಾ(ಏ.22): ಸನ್'ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸಿ, ಪುಣೆ ಸೂಪರ್‌ಜೈಂಟ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಎಂ.ಎಸ್.ಧೋನಿಯ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತು ತಲೆದೂಗಿದೆ.
ಮತ್ತೊಮ್ಮೆ ಮ್ಯಾಚ್ ಫಿನಿಷರ್ ಆಗಿ ಮಿಂಚಿದ ಧೋನಿ ಬ್ಯಾಟಿಂಗ್'ಗೆ ಆರ್'ಸಿಬಿ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್'ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
‘‘ಎಂ.ಎಸ್.ಧೋನಿ ಹಲವು ವರ್ಷಗಳಿಂದ ಅಪಾರ ಆತ್ಮವಿಶ್ವಾಸದೊಂದಿಗೆ ಏನನ್ನು ಸಾಧಿಸುತ್ತಾ ಬಂದಿದ್ದಾರೋ ಅದನ್ನು ಮತ್ತೊಮ್ಮೆ ಸಾಧಿಸಿದ್ದಾರೆ. ಎಂಥಾ ಅಹ್ಲಾದದಾಯಕ ಇನ್ನಿಂಗ್ಸ್. ನೋಡಲು ಆನಂದವಾಗುತ್ತದೆ’’ ಎಂದು ವಿರಾಟ್ ಟ್ವೀಟಿಸಿದ್ದಾರೆ.
ಇದೇ ವೇಳೆ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ‘‘ಅಸಾಧ್ಯವಾದ್ದದ್ದನ್ನು ಸಾಧ್ಯವಾಗಿಸುವವನೇ ಎಂ.ಎಸ್.ಧೋನಿ’’ ಎಂದು ಟ್ವಿಟರ್‌ನಲ್ಲಿ ಧೋನಿ ಆಟವನ್ನು ಬಣ್ಣಿಸಿದ್ದಾರೆ.