ಲಂಡನ್‌[ಮೇ.22]: ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಭಾರತ, ಆಸ್ಪ್ರೇಲಿಯಾ ಸೇರಿದಂತೆ ಒಟ್ಟು 200 ದೇಶಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಐಸಿಸಿ ತಿಳಿಸಿದೆ. 

ಈ ವರ್ಷ ಚೀನಾ, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ, ಕೆನಡಾ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಲ್ಲಿ ಪಂದ್ಯಗಳು ಪ್ರಸಾರವಾಗಲಿವೆ. ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನದಲ್ಲಿ ವಿಶ್ವಕಪ್‌ ಪಂದ್ಯಗಳು ನೇರ ಪ್ರಸಾರವಾಗಲಿದ್ದು, ಅಲ್ಲಿನ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಇದಷ್ಟೇ ಅಲ್ಲದೇ ಭಾರತದಲ್ಲಿ ಒಟ್ಟು 7 ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ದೊರೆಯಲಿದೆ. ಸ್ಟಾರ್ ಸ್ಪೋರ್ಟ್ಸ್’ನ ಒಟ್ಟು 50 ವೀಕ್ಷಕ ವಿವರಣೆಗಾರರು ಹಿಂದಿ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳಲ್ಲಿ ಕಾಮೆಂಟ್ರಿ ನೀಡಲಿದ್ದಾರೆ.  

ಯಾವ ದೇಶದಲ್ಲಿ, ಯಾವ ಚಾನೆಲ್’ನಲ್ಲಿ ವಿಶ್ವಕಪ್ ಕ್ರಿಕೆಟ್: ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಸ್ಟಾರ್ ಸ್ಪೋರ್ಟ್ಸ್: [ಭಾರತ ಮತ್ತು ಭಾರತೀಯ ಉಪಖಂಡ]

ಸ್ಕೈ ಸ್ಪೋರ್ಟ್ಸ್[SKY]: (ಯುನೈಟೆಡ್ ಕಿಂಗ್’ಡಂ[UK] ಮತ್ತು ರಿಪಬ್ಲಿಕ್ ಆಫ್ ಐರ್ಲೆಂಡ್)

ಸೂಪರ್ ಸ್ಪೋರ್ಟ್: [ದಕ್ಷಿಣ ಆಫ್ರಿಕಾ ಮತ್ತು ಆಫ್ರಿಕಾದ ಸಹರಾ ಉಪಖಂಡಗಳಲ್ಲಿ]

OSN: [ಆಫ್ರಿಕಾದ ಉತ್ತರ ಮತ್ತು ಮಧ್ಯ ಪೂರ್ವ ದೇಶಗಳಲ್ಲಿ]

ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಮತ್ತು ಚಾನೆಲ್ 9: [ಆಸ್ಟ್ರೇಲಿಯಾ]

ವಿಲ್ಲೋ ಟಿವಿ: [USA]

ಸ್ಕೈ ಟಿವಿ ಮತ್ತು ಪ್ರೈಮ್: [ನ್ಯೂಜಿಲೆಂಡ್]

ಟೆನ್ ಸ್ಪೋರ್ಟ್ಸ್ ಮತ್ತು P ಟಿವಿ: [ಪಾಕಿಸ್ತಾನ]

ESPN: [ಕೆರಿಬಿಯನ್]

ಗಾಜಿ ಟಿವಿ, ಮಾಸರಂಗ ಮತ್ತು ಬಿಟಿವಿ: [ಬಾಂಗ್ಲಾದೇಶ]

SLRC: [ಶ್ರೀಲಂಕಾ]

ಫಾಕ್ಸ್ ನೆಟ್’ವರ್ಕ್ ಗ್ರೂಫ್: [ಚೀನಾ ಹಾಗೂ ಏಷ್ಯಾ ಈಶಾನ್ಯ]

ಡಿಜಿಸೆಲ್: [ಏಷ್ಯಾ ಫೆಸಿಫಿಕ್]

ರೇಡಿಯೋ ಟಿವಿ ಆಫ್ಘಾನಿಸ್ತಾನ: [ಆಫ್ಘಾನಿಸ್ತಾನ]

ಯುಪ್ ಟಿವಿ: (ಯೂರೋಪ್ ಹಾಗೂ ಏಷ್ಯಾದ ಕೇಂದ್ರದ ಭಾಗಗಳಲ್ಲಿ)

ಏಕದಿನ ವಿಶ್ವಕಪ್’ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...