. ಈ ಸಂದರ್ಭದಲ್ಲಿ ಅತಿಯಾದ ವಿಶ್ವಾಸಕ್ಕೆ ಒಳಗಾದ ಅವರು ವಿಲಿಯರ್ಸ್‌ ಮೇಲೆ ಮಾತಿನ ಬಾಣಗಳನ್ನು ಬಿಟ್ಟಿದ್ದಾಗಿ ಹೇಳಿದ್ದಾರೆ.

ಮುಂಬೈ(ಜು.18): ೨೦೧೪ರ ಐಪಿಎಲ್ ಪಂದ್ಯಾವಳಿ ವೇಳೆ ದಕ್ಷಿಣ ಆಫ್ರಿಕಾ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡದ ಆಟಗಾರ ಎಬಿ ಡಿವಿಲಿಯರ್ಸ್‌ ಅವರ ವಿರುದ್ಧ ಸ್ಲೆಡ್ಜಿಂಗ್ ತಂತ್ರ ಬಳಸಿದ್ದೆ ಎಂದು ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಬಹಿರಂಗಗೊಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಬೂಮ್ರಾ, ಎಬಿಡಿಯವರನ್ನು ಔಟ್ ಮಾಡಿದ್ದರು. ಈ ಸಂದರ್ಭದಲ್ಲಿ ಅತಿಯಾದ ವಿಶ್ವಾಸಕ್ಕೆ ಒಳಗಾದ ಅವರು ವಿಲಿಯರ್ಸ್‌ ಮೇಲೆ ಮಾತಿನ ಬಾಣಗಳನ್ನು ಬಿಟ್ಟಿದ್ದಾಗಿ ಹೇಳಿದ್ದಾರೆ.

‘ಸಾಮಾನ್ಯವಾಗಿ ನಾನು ಸ್ಲೆಡ್ಜ್ ಮಾಡುವುದಿಲ್ಲ. ಆದರೆ, ಅಂದು ಎಬಿ ಡಿವಿಲಿಯರ್ಸ್‌ ವಿಕೆಟ್ ಪಡೆಯುತ್ತಿದಂತೆ ನಿಯಂತ್ರಣ ಕಳೆದುಕೊಂಡುಬಿಟ್ಟೆ’ ಎಂದು ಬೂಮ್ರಾ ಹೇಳಿದ್ದಾರೆ.