ಐಪಿಎಲ್'ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿರುವ ಸ್ಮಿತ್ ದೇಶಿಯ ಟಿ20 ಟೂರ್ನಿಯಲ್ಲಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.
ಬಾರ್ಬಡೋಸ್(ಮಾ.02): ಕೆರೀಬಿಯನ್ ತಂಡದ ಹೊಡಿಬಡಿ ದಾಂಡಿಗ ಡ್ವೇನ್ ಸ್ಮಿತ್ ಎಲ್ಲಾ ವಿಧದ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಘೋಷಿಸಿದ್ದಾರೆ.
33 ವರ್ಷದ ಡ್ವೇನ್ ಸ್ಮಿತ್ 2015ರ ವಿಶ್ವಕಪ್'ನಲ್ಲಿ ಯುಎಇ ವಿರುದ್ಧ ವೆಸ್ಟ್'ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಆನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆಯುವಲ್ಲಿ ಸ್ಮಿತ್ ವಿಫಲರಾಗಿದ್ದರು.
ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಮಿತ್ ಬುಧವಾರ ಕರಾಚಿ ಕಿಂಗ್ಸ್ ವಿರುದ್ಧ ಅರ್ಹತಾ ಫೈನಲ್ ಪಂದ್ಯವನ್ನು ಪ್ರತಿನಿಧಿಸಲಿದ್ದಾರೆ.
ಐಪಿಎಲ್'ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿರುವ ಸ್ಮಿತ್ ದೇಶಿಯ ಟಿ20 ಟೂರ್ನಿಯಲ್ಲಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.
ಒಟ್ಟು 105 ಏಕದಿನ ಪಂದ್ಯಗಳಿಂದ 1,560 ಹಾಗೂ 33 ಟಿ20 ಪಂದ್ಯಗಳಿಂದ 582 ರನ್ ಬಾರಿಸಿದ್ದಾರೆ.
