ಸಿಡ್ನಿ[ಡಿ.04]: ಕ್ರಿಸ್‌ ಗೇಲ್‌ ವಿರುದ್ಧ ಆಸ್ಪ್ರೇಲಿಯಾದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಫೇರ್‌ಫ್ಯಾಕ್ಸ್‌ ಮೀಡಿಯಾ ಮಾಡಿದ್ದ ಲೈಂಗಿಕ ಕಿರುಕುಳ ವರದಿ ಸುಳ್ಳು ಎಂದು ಸಾಬೀತಾಗಿದೆ. ಇದರಿಂದಾಗಿ ಸಂಸ್ಥೆ ಗೇಲ್‌ಗೆ 1.55 ಕೋಟಿ ರುಪಾಯಿ ಪರಿಹಾರ ನೀಡಬೇಕಿದೆ. 

ಆಸೀಸ್ ಮಾಧ್ಯಮಗಳಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಗೇಲ್

2015ರ ಐಸಿಸಿ ವಿಶ್ವಕಪ್‌ ವೇಳೆ ಗೇಲ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ತಂಡದ ಮಸಾಜ್‌ ಥೆರಾಪಿಸ್ಟ್‌ ಜತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಸಂಸ್ಥೆಗೆ ಒಳಪಟ್ಟಿರುವ ’ದಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸಿತ್ತು. 

ಮಸಾಜ್ ಥೆರಪಿಸ್ಟ್ ಜತೆ ಗೇಲ್ ಅನುಚಿತವಾಗಿ ವರ್ತಿಸಿಲ್ಲ

ಗೇಲ್‌ ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪವನ್ನು ತಳ್ಳಿಹಾಕಿ, ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯೂ ಸೌಥ್‌ ವೇಲ್ಸ್‌ ಸುಪ್ರೀಂ ಕೋರ್ಟ್‌ ‘ಗೇಲ್‌ ಘನತೆಗೆ ಧಕ್ಕೆ ತರುವ ಯತ್ನವಿದು’ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.