2015ರ ವಿಶ್ವಕಪ್ ವೇಳೆ ಮಸಾಜ್ ಮಾಡಲು ಬಂದಿದ್ದ ಮಹಿಳೆಗೆ ಗೇಲ್ ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದರು ಎಂದು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಗಂಭೀರವಾಗಿ ಆರೋಪಿಸಿದ್ದವು.

ಸಿಡ್ನಿ(ಅ.24): ಮಸಾಜ್ ಮಾಡುವ ವೇಳೆ ಮಹಿಳಾ ಥೆರಪಿಸ್ಟ್‌'ಗೆ ಗುಪ್ತಾಂಗ ಪ್ರದರ್ಶಿಸಲಾಗಿತ್ತು ಎಂದು ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪವನ್ನು ವೆಸ್ಟ್'ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌'ಮನ್ ಕ್ರೀಸ್‌ ಗೇಲ್ ತಳ್ಳಿಹಾಕಿದ್ದಾರೆ.

ಇದರ ಜತೆಗೆ ತಮ್ಮ ಕುರಿತು ಸುಳ್ಳು ಸುದ್ದಿ ಪ್ರಕಟಿಸಿವೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಸಹ ದಾಖಲಿಸಿದ್ದಾರೆ.

2015ರ ವಿಶ್ವಕಪ್ ವೇಳೆ ಮಸಾಜ್ ಮಾಡಲು ಬಂದಿದ್ದ ಮಹಿಳೆಗೆ ಗೇಲ್ ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದರು ಎಂದು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಗಂಭೀರವಾಗಿ ಆರೋಪಿಸಿದ್ದವು. ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಟಿ20 ಲೀಗ್ ವೇಳೆಯೂ ಗೇಲ್ ಭಾರೀ ವಿವಾದಕ್ಕೆ ಸಿಲುಕಿದ್ದರು.