ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ವೆಸ್ಟ್ಇಂಡೀಸ್ ತಂಡಕ್ಕೆ ಅಭ್ಯಾಸದಲ್ಲೇ ಹಿನ್ನಡೆಯಾಗಿದೆ. ವೆಸ್ಟ್ಇಂಡೀಸ್ ತಂಡದ  ಮುಖ್ಯ ಕೋಚ್ ಇದೀಗ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದಾರೆ. 

ದುಬೈ(ಅ.16): ಭಾರತ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಆಘಾತದ ಬೆನ್ನಲ್ಲೇ ವೆಸ್ಟ್ಇಂಡೀಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ವೆಸ್ಟ್ಇಂಡೀಸ್ ತಂಡದ ಮುಖ್ಯ ಕೋಚ್ ಸ್ಟುವರ್ಟ್ ಲಾಗೆ ಆರಂಭಿಕ 2 ಏಕದಿನ ಪಂದ್ಯದಿಂದ ಅಮಾನತ್ತು ಮಾಡಲಾಗಿದೆ. 

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಏಕದಿನ ಸರಣಿ ಇದೇ 21 ರಿಂದ ಆರಂಭಗೊಳ್ಳಲಿದೆ. ಇದಕ್ಕೆ ತಯಾರಿ ಆರಂಭಿಸಿರುವ ವಿಂಡೀಸ್ ತಂಡಕ್ಕೆ ಇದೀಗ ಮತ್ತೆ ಹಿನ್ನಡೆಯಾಗಿದೆ. ಹೆದರಾಬಾದ್ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ತೀರ್ಪು ವಿರುದ್ಧ ಕೋಚ್ ಬಹಿರಂಗ ಅಸಮಧಾನ ವ್ಯಕ್ತಪಡಿಸಿದ್ದರು. ಈ ಮೂಲಕ ಒಟ್ಟು 3 ಡಿಮೆರಿಟ್ ಪಾಯಿಂಟ್ಸ್ ಪಡೆದಿರುವ ಸ್ಟುವರ್ಟ್ ಇದೀಗ ಆರಂಭಿಕ 2 ಪಂದ್ಯದಿಂದ ಅಮಾನತ್ತಾಗಿದ್ದಾರೆ. ಇಷ್ಟೇ ಅಲ್ಲ ಪಂದ್ಯದ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ. 

Scroll to load tweet…

ಕೀರನ್ ಪೊವೆಲ್ ವಿರುದ್ದ ಅಂಪೈರ್ ಹಾಗೂ ಥರ್ಡ್ ಅಂಪೈರ್ ಔಟ್ ನೀಡಿದ್ದರು. ಇದು ಕೋಚ್ ಸ್ಟುವರ್ಟ್ ಲಾ ಅಸಮಧಾನಕ್ಕೆ ಕಾರಣವಾಗಿತ್ತು. 2017ರ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇದೇ ರೀತಿ ಅಸಮಧಾನ ವ್ಯಕ್ತಪಡಿಸಿ ಡಿಮೆರಿಟ್ ಪಾಯಿಂಟ್ಸ್ ಪಡೆದಿದ್ದರು.