ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗಮನಿಸಿದರೆ ಮತ್ತೊಬ್ಬ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರೇ ಎಂಬ ಅನುಮಾನವೂ ಮೂಡತೊಡಗಿದೆ. ಹಾರ್ದಿಕ್ ಪಾಂಡ್ಯ ಅಬ್ಬರದ ಶತಕಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗರು ತಲೆದೂಗಿದ್ದು ಹೀಗೆ...

ಪಲ್ಲೆಕೆಲೆ(ಶ್ರೀಲಂಕಾ)(ಆ.13): ಟೀಂ ಇಂಡಿಯಾದ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್'ನಲ್ಲೂ ತಮ್ಮ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದಾರೆ. ಶ್ರೀಲಂಕಾ ಎದುರು ಅಕ್ಷರಶಃ ಏಕದಿನ ಕ್ರಿಕೆಟ್ ಮಾದರಿಯಂತೆ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ ಅರ್ಧಶತಕವನ್ನು 61 ಎಸೆತಗಳಲ್ಲಿ ಪೂರೈಸಿದ ಪಾಂಡ್ಯ, ಆನಂತರ ಶತಕ ಪೂರೈಸಲು ತೆಗೆದುಕೊಂಡದ್ದು ಕೇವಲ 25 ಎಸೆತಗಳನ್ನು ಮಾತ್ರ. ಕೇವಲ 86 ಎಸೆತಗಳಲ್ಲಿ ಶತಕ ಸಿಡಿಸಿದ ಪಾಂಡ್ಯ, 108 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಅವರ ಅಬ್ಬರದ ಇನಿಂಗ್ಸ್'ನಲ್ಲಿ 8 ಬೌಂಡರಿ ಹಾಗೂ 7 ಗಗನಚುಂಬಿ ಸಿಕ್ಸರ್'ಗಳೂ ನೆರೆದ ಪ್ರೇಕ್ಷಕರನ್ನು ರಂಜಿಸಿದವು.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗಮನಿಸಿದರೆ ಮತ್ತೊಬ್ಬ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರೇ ಎಂಬ ಅನುಮಾನವೂ ಮೂಡತೊಡಗಿದೆ. ಹಾರ್ದಿಕ್ ಪಾಂಡ್ಯ ಅಬ್ಬರದ ಶತಕಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗರು ತಲೆದೂಗಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…