ನವದೆಹಲಿ(ಮಾ.05): ಐಪಿಎಲ್‌ ಆಯೋಜನೆ ಹಾಗೂ ಅದರ ವ್ಯವಹಾರಗಳಲ್ಲಿ ತಾನು ತಲೆಹಾಕುವುದಿಲ್ಲ ಎಂದು ಸೋಮವಾರ ಐಸಿಸಿ ಸ್ಪಷ್ಟಪಡಿಸಿದೆ. 

ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

‘ಐಪಿಎಲ್‌ ವ್ಯವಹಾರಗಳಲ್ಲಿ ಮೂಗು ತೂರಿಸಿ, ಬಿಸಿಸಿಐ ಮೇಲೆ ದಬ್ಬಾಳಿಕೆ ನಡೆಸಲು ಐಸಿಸಿ ಚಿಂತನೆ ನಡೆಸಿದೆ ಎಂದು ಭಾರತೀಯ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾದ ವರದಿಗಳು. ಐಸಿಸಿಗೆ ಅಂತಹ ಯಾವುದೇ ಯೋಚನೆ ಇಲ್ಲ’ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸಿಇಒ ಡೇವಿಡ್‌ ರಿಚರ್ಡ್‌ಸನ್‌ ಹೇಳಿದ್ದಾರೆ. ಐಪಿಎಲ್‌ನ ನೀತಿ ನಿಯಮಗಳಲ್ಲಿ ಐಸಿಸಿ ಬದಲಾವಣೆ ತರಲು ನಿರ್ಧರಿಸುತ್ತಿದೆ. ವಿಶ್ವದ ದುಬಾರಿ ಟಿ20 ಲೀಗ್‌ ಮೇಲೆ ಅಧಿಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಪ್ರಕಟಿಸಿತ್ತು.

ಐಪಿಎಲ್‌ ಮೇಲೆ ಅಧಿಪತ್ಯ ಸಾಧಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿರುವ ಐಸಿಸಿ, ಬದಲಿಗೆ ಭಾರತೀಯ ಟಿ20 ಲೀಗ್‌ ಅನ್ನು ಕೊಂಡಾಡಿದೆ. ‘ವಿಶ್ವದಲ್ಲಿ ಕೆಲ ಶ್ರೇಷ್ಠ ಟಿ20 ಲೀಗ್‌ಗಳು ನಡೆಯುತ್ತಿರುವುದು ನಮ್ಮ ಅದೃಷ್ಟ. ಎಲ್ಲಾ ಲೀಗ್‌ಗಳಿಗೂ ಐಪಿಎಲ್‌ ಮಾದರಿಯಾಗಿದೆ’ ಎಂದು ರಿಚರ್ಡ್‌ಸನ್‌ ಹೇಳಿದ್ದಾರೆ.

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಬಹುನೀರೀಕ್ಷಿತ 12ನೇ ಆವೃತ್ತಿಯ IPL ಟೂರ್ನಿಯು ಇದೇ ಮಾರ್ಚ್ 23ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.