ಭಾರತಕ್ಕಿಂತ ಆಫ್ಘನ್ ಉತ್ತಮ ಸ್ಪಿನ್ನರ್’ಗಳನ್ನು ಹೊಂದಿದೆ

First Published 10, Jun 2018, 12:40 PM IST
We have better spinners than India Asghar Stanikzai
Highlights

ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಆಫ್ಘಾನಿಸ್ತಾನ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

ನವದೆಹಲಿ[ಜೂ.10]: ಭಾರತ ತಂಡದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗಿಂತ ನಮ್ಮ ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳಿದ್ದಾರೆ ಎಂದು ಆಫ್ಘಾನಿಸ್ತಾನ ತಂಡದ ನಾಯಕ ಅಸ್ಗರ್ ಸ್ಟಾನಿಕ್ಜೈ ಹೇಳಿದ್ದಾರೆ. 

ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಆಫ್ಘಾನಿಸ್ತಾನ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ರಶೀದ್ ಖಾನ್, ಮುಜೀಬ್, ನಬಿ, ರಹಮತ್, ಜಹೀರ್ ಖಾನ್ ಆಫ್ಘನ್ ತಂಡದ ಸ್ಪಿನ್ ಅಸ್ತ್ರಗಳಾಗಿದ್ದಾರೆ.  ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ಆರ್. ಅಶ್ವಿನ್ ಕ್ರಮವಾಗಿ 4 ಹಾಗೂ 5 ನೇ ಸ್ಥಾನದಲ್ಲಿದ್ದಾರೆ.

ಜೂ.14 ರಿಂದ ಬೆಂಗಳೂರಲ್ಲಿ ಭಾರತ-ಆಫ್ಘನ್ ಟೆಸ್ಟ್ ನಡೆಯಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
 

loader