ಬೆಂಗಳೂರು[ಜೂ.05]: ಇದೇ ತಿಂಗಳ 14ರಿಂದ ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಲಿರುವ ಭಾರತ-ಆಫ್ಘಾನಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದ ವೀಕ್ಷಿಸಲು ಆನ್’ಲೈನ್’ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ವಿವಿಧ ವಿಭಾಗದ ಆಸನಗಳಿಗೆ 50 ರುಪಾಯಿಯಿಂದ 2000 ರುಪಾಯಿಗಳ ಟಿಕೆಟ್ ಲಭ್ಯವಿವೆ.

ಟಿಕೆಟ್’ಗಾಗಿ ಇಲ್ಲಿ ಕ್ಲಿಕ್ಕಿಸಿ:

ಈ ಕುರಿತಂತೆ ಕರ್ನಾಟಕ ರಣಜಿ ತಂಡದ ಫೇಸ್’ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಇಂದಿನಿಂದಲೇ ಟಿಕೆಟ್ ಖರೀದಿಸಬಹುದಾಗಿದೆ. G-2, G-1 ಸ್ಟ್ಯಾಂಡ್’ಗಳ ಆಸನಕ್ಕೆ 50 ರುಪಾಯಿಗಳಾಗಿದ್ದರೆ, P2 ಸ್ಟ್ಯಾಂಡ್'ನ ಆಸನಗಳಿಗೆ ಗರಿಷ್ಠ 2 ಸಾವಿರ ರುಪಾಯಿ ನಿಗದಿಪಡಿಸಲಾಗಿದೆ. ಇದಷ್ಟೇ ಅಲ್ಲದೇ M4 ಸ್ಟ್ಯಾಂಡ್’ಗೆ 100, D ಕಾರ್ಪೋರೇಟ್ ಸ್ಟ್ಯಾಂಡ್’ಗೆ 300, E ಎಕ್ಸಿಕ್ಯೂಟಿವ್ ಸ್ಟ್ಯಾಂಡ್’ಗೆ 400, ಹಾಗೆಯೇ ಪೆವಿಲಿಯನ್ ಟೆರಸ್’ಗೆ 1000 ರುಪಾಯಿ ನಿಗದಿ ಪಡಿಸಲಾಗಿದೆ.

ಕಳೆದ ವರ್ಷವಷ್ಟೇ ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದಿರುವ ಆಫ್ಘಾನಿಸ್ತಾನ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.