ಕಾಬೂಲ್[ಮೇ.29]: ಭಾರತ-ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ 16 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಅಸ್ಗರ್ ಸ್ಟ್ಯಾನಿಕಜೈ ತಂಡವನ್ನು ಮುನ್ನಡೆಸಲಿದ್ದಾರೆ.
ಬೆಂಗಳೂರಲ್ಲಿ ಜೂನ್ 14ರಿಂದ ಆರಂಭವಾಗಲಿರುವ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಆಫ್ಘಾನಿಸ್ತಾನ ತಂಡ ಪ್ರಕಟಗೊಂಡಿದ್ದು, ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಸನ್’ರೈಸರ್ಸ್ ಪರ ಗಮನಸೆಳೆದಿದ್ದ ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೆಯೇ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಮುಜೀಬ್ ರಹಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷವಷ್ಟೇ ಆಫ್ಘಾನಿಸ್ತಾನ ತಂಡವು ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದ 12ನೇ ರಾಷ್ಟ್ರವೆನಿಸಿಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ತಂಡದ ವಿವರ: ಅಸ್ಗರ್ ಸ್ಟ್ಯಾನಿಕಜೈ[ನಾಯಕ], ಮೊಹಮದ್ ಶಹಜಾದ್, ಜಾವೆದ್ ಅಹಮದಿ, ಇಶಾನುಲ್ಲಾ ಜನತ್, ರಹಮತ್ ಶಾ, ನಸೀರ್ ಜಮಾಲ್, ಹಶ್ಮತುಲ್ಲಾ ಶಹೀದಿ, ಅಫ್ಸರ್ ಜಜಾಯ್, ಮೊಹಮದ್ ನಬಿ, ರಶೀದ್ ಖಾನ್, ಜಹೀರ್ ಖಾನ್, ಹಮ್ಜಾ ಹೋಟಕ್, ಸಯ್ಯದ್ ಶೆರ್ಜಾದ್, ಯಮೀನ್ ಅಹಮ್ಮದ್’ಜೈ, ವಫಾದರ್ ಮೋಹಾಂದ್
ಮುಜೀಬ್ ಉರ್ ರಹಮಾನ್.