‘ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನಾವು ನಿರುದ್ಯೋಗಿಗಳಾಗುತ್ತೇವೆ. ನಾವು ಕ್ರಿಕೆಟ್‌ ಆಡಲು ಸಾಧ್ಯವಿಲ್ಲ'

ಸಿಡ್ನಿ(ಜೂ.06): ಕ್ರಿಕೆಟ್‌ ಆಸ್ಪ್ರೇಲಿಯಾ ಹಾಗೂ ಆಟಗಾರರ ನಡುವಿನ ವೇತನ ಬಿಕ್ಕಟ್ಟು ಮುಂದುವರಿದಿದ್ದು, ಆಸೀಸ್ ತಂಡದ ಉಪನಾಯಕ ಡೇವಿಡ್‌ ವಾರ್ನರ್‌ ಪ್ರತಿಷ್ಠಿತ ಆ್ಯಷಸ್‌ ಸರಣಿ ಬಹಿಷ್ಕರಿಸುವುದಾಗಿ ಕಳೆದ ತಿಂಗಳು ನೀಡಿದ್ದ ಹೇಳಿಕೆಗೆ ಬದ್ಧರಿರುವುದಾಗಿ ಹೇಳಿದ್ದಾರೆ. 
ನೂತನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಜೂನ್‌ 30ರ ನಂತರ ವೇತನ ನೀಡುವುದಿಲ್ಲ ಎನ್ನುವ ಕ್ರಿಕೆಟ್‌ ಆಸ್ಪ್ರೇಲಿಯಾ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ವಾರ್ನರ್‌ ‘ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನಾವು ನಿರುದ್ಯೋಗಿಗಳಾಗುತ್ತೇವೆ. ನಾವು ಕ್ರಿಕೆಟ್‌ ಆಡಲು ಸಾಧ್ಯವಿಲ್ಲ' ಎಂದಿದ್ದಾರೆ. 
ಇದೇ ವೇಳೆ ಕ್ರಿಕೆಟ್‌ ಆಸ್ಪ್ರೇಲಿಯಾ ನಮ್ಮೊಂದಿಗೆ ರಾಜೀ ಮಾಡಿಕೊಳ್ಳಲಿದೆ ಎನ್ನುವ ವಿಶ್ವಾಸವನ್ನೂ ವಾರ್ನರ್‌ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.