ಈ ಸಾಧನೆ ಮಾಡಿದ ಒಟ್ಟಾರೆ 5ನೇ ಹಾಗೂ ಮೊದಲ ವಿದೇಶಿ ಆಟಗಾರ ಎನ್ನುವ ದಾಖಲೆಯನ್ನು ವಾರ್ನರ್ ನಿರ್ಮಿಸಿದರು.

ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರರಲ್ಲಿ ಡೇವಿಡ್ ವಾರ್ನರ್ ಸಹ ಒಬ್ಬರು. ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ವಾರ್ನರ್, ಐಪಿಎಲ್‌ನಲ್ಲಿ 4000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಒಟ್ಟಾರೆ 5ನೇ ಹಾಗೂ ಮೊದಲ ವಿದೇಶಿ ಆಟಗಾರ ಎನ್ನುವ ದಾಖಲೆಯನ್ನು ವಾರ್ನರ್ ನಿರ್ಮಿಸಿದರು. ಮತ್ತೊಂದು ವಿಶೇಷ ಅಂದರೆ ಐವರ ಪೈಕಿ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಹಿರಿಮೆಗೆ ವಾರ್ನರ್ ಪಾತ್ರರಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್‌ನ ಅಗ್ರ 5 ರನ್ ಸರದಾರರು

ಆಟಗಾರ ಪಂದ್ಯ ರನ್

ಸುರೇಶ್ ರೈನಾ 161 4540

ವಿರಾಟ್ ಕೊಹ್ಲಿ 149 4418

ರೋಹಿತ್ ಶರ್ಮಾ 157 4157

ಗೌತಮ್ ಗಂಭೀರ್ 147 4088

ಡೇವಿಡ್ ವಾರ್ನರ್ 114 4014